BBMP
Loading ...

GBA

Greater Bengaluru News9 : ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಜೂ.30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದ ಬಳಿಕ ಜಿಬಿಎ ಚುನಾವಣೆಗೆ ಸಿದ್ಧತೆಗಳು ಗರಿಗೆದರಿವೆ. ರಾಜ್ಯ ಸರಕಾರ ವಾರ್ಡ್‌ವಾರು ಕರಡು ಮೀಸಲಾತಿ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳ ಸಂಗ್ರಹಕ್ಕೆ ಮುಂದಾದ ಹೊತ್ತಿನಲ್ಲಿಯೇ ಮಹಿಳಾ ಮೀಸಲು ಹಂಚಿಕೆಯಲ್ಲಿಅಪಸ್ವರ ಕೇಳಿ ಬಂದಿದೆ.

ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿಶೇ.50ರಷ್ಟು ಮಹಿಳಾ ಮೀಸಲು ನೀಡುವ ಭರವಸೆ ನೀಡಿದ್ದ ಸರಕಾರ, ಮೀಸಲಾತಿ ಹಂಚಿಕೆ ವೇಳೆ ಮಹಿಳೆಯರಿಗೆ ಶೇ.50ರಷ್ಟು ಮೀಸಲು ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ. ವಾರ್ಡ್‌ವಾರು ಮೀಸಲು ಪಟ್ಟಿಯಲ್ಲಿ369 ವಾರ್ಡ್‌ಗಳ ಪೈಕಿ ಕೇವಲ 176 ವಾರ್ಡ್‌ಗಳಲ್ಲಿಮಾತ್ರ ಮಹಿಳಾ ಮೀಸಲು ಹಂಚಿಕೆಯಾಗಿದ್ದು, ಶೇ.47.7ರಷ್ಟು ಮಾತ್ರ ಮೀಸಲು ಸಿಕ್ಕಂತಾಗಿದೆ. ಶೇ.50 ರಷ್ಟು ದಕ್ಕಲು ಇನ್ನೂ 9 ವಾರ್ಡ್‌ಗಳಲ್ಲಿಮೀಸಲು ನೀಡಬೇಕಿದೆ.

ಸದ್ಯ ಜಿಬಿಎ ಚುನಾವಣೆಗೆ ವಾರ್ಡ್‌ವಾರು ಕರಡು ಮೀಸಲು ಪಟ್ಟಿ ಬಿಡುಗಡೆಗೊಳಿಸಿದ್ದ ನಗರಾಭಿವೃದ್ಧಿ ಇಲಾಖೆ, 12 ದಿನಗಳ ಕಾಲ ಸಾರ್ವಜನಿಕರ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿತ್ತು. ಇದುವರೆಗೆ ಸುಮಾರು 700 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಬಹುತೇಕ ಮಹಿಳಾ ಮೀಸಲು ಹಂಚಿಕೆ ಕುರಿತಾಗಿಯೇ ಇವೆ.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪೈಕಿ ಪೂರ್ವ ವಲಯದ 50 ವಾರ್ಡ್‌ಗಳಲ್ಲಿಕೇವಲ 23 ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿದೆ. ಕೇಂದ್ರ ವಲಯದಲ್ಲಿ63 ವಾರ್ಡ್‌ಗಳಲ್ಲಿ30 ವಾರ್ಡ್‌ಗಳು ಮಾತ್ರ ಮಹಿಳೆಯರಿಗೆ ಮೀಸಲಾಗಿದ್ದು, ಅತಿಹೆಚ್ಚು ವ್ಯಾಪ್ತಿ ಹೊಂದಿರುವ ವಲಯಗಳು ಕೂಡ ಶೇ.50ರ ಟಾರ್ಗೆಟ್‌ ತಲುಪುವುದರಲ್ಲಿಹಿಂದೆ ಉಳಿದಿವೆ. ಅತಿ ಹೆಚ್ಚು ವಾರ್ಡ್‌ಗಳನ್ನು ಹೊಂದಿರುವ ಪಶ್ಚಿಮ ವಲಯದ 112 ವಾರ್ಡ್‌ಗಳಲ್ಲಿಕೇವಲ 55 ಸೀಟುಗಳು ಮಾತ್ರ ಮಹಿಳೆಯರಿಗೆ ಮೀಸಲಾಗಿವೆ. ಉಳಿದಂತೆ ಉತ್ತರ ಮತ್ತು ದಕ್ಷಿಣ ವಲಯಗಳ 72 ವಾರ್ಡ್‌ಗಳ ಪೈಕಿ ಕೇವಲ 34 ಸೀಟುಗಳು ಮಾತ್ರ ಮಹಿಳಾ ಮೀಸಲು ವ್ಯಾಪ್ತಿಗೆ ಒಳಪಟ್ಟಿವೆ.

”2011ರ ಜನಗಣತಿಯ ಅಂಕಿ-ಅಂಶಗಳನ್ನು ಆಧರಿಸಿ ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ-2024ರ ಆಧಾರದಲ್ಲಿಯೇ ಮೀಸಲು ಕರಡು ಸಿದ್ಧಪಡಿಸಲಾಗಿದೆ. ಮೀಸಲು ಇಲ್ಲದ ವಾರ್ಡ್‌ಗಳೂ ಸೇರಿದಂತೆ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಲಾಗಿದೆ. ಸಮ-ಬೆಸ ಸಂಖ್ಯೆಗಳ ಆಧಾರದಲ್ಲಿಕೊನೆಯಲ್ಲಿಉಳಿಯುವ ವಾರ್ಡ್‌ನಲ್ಲಿಮಹಿಳಾ ಮೀಸಲಾತಿ ಅನ್ವಯವಾಗುವುದಿಲ್ಲ,” ಎಂದು ಸರಕಾರದ ಅಧೀನ ಕಾರ್ಯದರ್ಶಿ ನಂದಕುಮಾರ್‌ ತಿಳಿಸಿದ್ದಾರೆ. ”ಎಲ್ಲಾಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಏನೆಲ್ಲಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಾಗುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *