BBMP
Loading ...

ಬೆಂಗಳೂರು:- ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ಇ ಖಾತಾವು ಬೆಂಗಳೂರು ಒನ್‌ ಕೇಂದ್ರದಲ್ಲಿ ದೊರೆಯಲಿದೆ. ಬಿಬಿಎಂಪಿ ಕಚೇರಿಗಳಿಗೆ ಅಲೆದಾಡುವುದರ ಬದಲಿಗೆ ಸಮೀಪದ ಬೆಂಗಳೂರು ಒನ್‌ ಕೇಂದ್ರಗಳಿಗೆ ತೆರಳಿ ನಿಗದಿತ ಶುಲ್ಕ ನೀಡಿ ಇ ಖಾತಾ ಪಡೆಯಬಹುದು.

ಇ-ಖಾತಾ ಪಡೆಯಲು ಶುಲ್ಕ ಎಷ್ಟು?

ಬೆಂಗಳೂರು ಒನ್ ಕೇಂದ್ರದಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕು.

ಬಿಬಿಎಂಪಿಗೆ 125 ರೂ.(ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಮಾತ್ರ) ಪಾವತಿಸಬೇಕು.

ಯಾವೆಲ್ಲ ದಾಖಲೆ ಪತ್ರಗಳು ಬೇಕು

ಬೆಂಗಳೂರು ಒನ್‌ನಲ್ಲಿ ಇಖಾತೆ ಪಡೆಯಲು ದಾಖಲೆ ಪತ್ರಗಳನ್ನು ತೋರಿಸಿದರೆ ಸಾಕು, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಇಟ್ಟುಕೊಳ್ಳಲು ನೀಡಬಾರದು. ಕೆಳಗಿನ ದಾಖಲೆಗಳ ಪ್ರತಿಯೊಂದಿಗೆ ನೀವು ಬೆಂಗಳೂರು ಒನ್ ಕೇಂದ್ರವನ್ನು ಸಂಪರ್ಕಿಸಬೇಕು(ಅವುಗಳಲ್ಲಿ ಕೆಲವನ್ನು ತೋರಿಸಲು ಮತ್ತು ಸ್ಕ್ಯಾನ್ ಮಾಡಲು ಮಾತ್ರ ಅಲ್ಲಿ ಸಲ್ಲಿಸುವ/ನೀಡುವ ಅಗತ್ಯವಿಲ್ಲ) ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

(1) ನಿಮ್ಮ ಆಸ್ತಿ ತೆರಿಗೆ ರಶೀದಿ

(2) ನಿಮ್ಮ ಮಾರಾಟ ಅಥವಾ ನೋಂದಾಯಿತ ಪತ್ರ

(3) ಎಲ್ಲಾ ಮಾಲೀಕರ ಆಧಾರ್

(4) ಬೆಸ್ಕಾಂ ಬಿಲ್

(5) ಜಲಮಂಡಳಿ ಬಿಲ್ (ನೀವು ಕಾವೇರಿ ಸಂಪರ್ಕವನ್ನು ಹೊಂದಿದ್ದರೆ)

(6) ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ (ಇದರ ದಾಖಲೆ ಹೊಂದಿದ್ದರೆ)

(7) ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ(ಇದರ ದಾಖಲೆ ಹೊಂದಿದ್ದರೆ)

8) ಡಿಸಿ ಪರಿವರ್ತನೆ (ಇದರ ದಾಖಲೆ ಹೊಂದಿದ್ದರೆ)

(9) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್(KHB) ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಹಂಚಿಕೆ ಪತ್ರ (ಇದು ನಿಮ್ಮ ಪ್ರಕರಣಕ್ಕೆ ಅನ್ವಯಿಸಿದರೆ ಮತ್ತು ನೀವು ಇದರ ದಾಖಲೆ ಹೊಂದಿದ್ದರೆ)

ನೀವು ಮೇಲಿನ ದಾಖಲೆಗಳನ್ನು ಬೆಂಗಳೂರು ಒನ್ ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿಲ್ಲ. ಆದರೆ ಆನ್‌ಲೈನ್ ವಿವರಗಳನ್ನು ಸಲ್ಲಿಸಲು ಅವರಿಗೆ ತೋರಿಸಿ ಮತ್ತು ನಂತರ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಬಿಬಿಎಂಪಿ ತಿಳಿಸಿ.

Leave a Reply

Your email address will not be published. Required fields are marked *