BBMP
Loading ...

Metro

ಬೆಂಗಳೂರು: ಮೆಟ್ರೋ ದರ ಏರಿಕೆ ಎಫೆಕ್ಟ್, ಒಂದೆಡೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಸಿದರೆ, ಮತ್ತೊಂದೆಡೆ ಬೆಂಗಳೂರು ಟ್ರಾಫಿಕ್ ಹೆಚ್ಚಳ ಮಾಡಿದೆ. ಇದರಿಂದ ಬೆಂಗಳೂರಲ್ಲಿ ವಾಯು ಮಾಲಿನ್ಯ ಹೆಚ್ಚಾಗ್ತಿದೆ, ವಾಯುಮಾಲಿನ್ಯದ ಜೊತೆಗೆ ಟ್ರಾಫಿಕ್ ಬಿಸಿ ಕೂಡ ಸಿಟಿ ಜನ್ರ ತಲೆ ಕೆಡಿಸಿದೆ. ಈ ಬಗ್ಗೆ IISC ಪ್ರೊಫೆಸರ್ ಮಾಡಿದ ಅಧ್ಯಯನ ಅಘಾತಕಾರಿ ಅಂಶಗಳನ್ನು ರಿವೀಲ್ ಮಾಡಿದೆ.

ಜನವರಿಯಲ್ಲಿ ಬಸ್ ದರ ಏರಿಕೆಯ ನಂತರ ಫೆಬ್ರವರಿ 9 ರಿಂದ ಮೆಟ್ರೋ ದರ ಏರಿಕೆಯನ್ನು ಶೇಕಡಾ 100 ವರೆಗೂ ಮಾಡಲಾಯಿತ್ತು. ಈ ದರ ಏರಿಕೆಯ ಎಫೆಕ್ಟ್ ಜನ ಸಾಮಾನ್ಯರ ಮೇಲೆ ಬಿದ್ದಿದ್ದು, ಪ್ರತಿನಿತ್ಯ ಸುಮಾರು 80-90 ಸಾವಿರ ಮೆಟ್ರೋ ಪ್ರಯಾಣಿಕರು ಮೆಟ್ರೋದಿಂದ ದೂರವಾಗಿ ಟು-ವಿಲ್ಹರ್, ಕಾರ್ ಗಳತ್ತ ಮುಖ ಮಾಡಿದ್ದಾರೆ.

ಇದರಿಂದ ನಗರದಲ್ಲಿ ಒಂದೆಡೆ ಟ್ರಾಫಿಕ್ ಹೆಚ್ಚಳದ ಜೊತೆಗೆ ಏರ್ ಪೊಲ್ಯೂಷನ್ ಸಹ ಹೆಚ್ಚಾಗ್ತಿದೆ. ಐಐಎಸ್ ಸಿ ತಜ್ಞ ಆಶಿಶ್ ವರ್ಮಾ ಅಧ್ಯಯನದಂತೆ ಶೇಕಡಾ 5% ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಶೇಕಡಾ 5 ಪ್ರಯಾಣಿಕರು ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿದ್ದು, ಇದು ಜನರ ಜೀವನ ಹಾಗೂ ವಾಯುಮಾಲಿನ್ಯದ ‌ಮೇಲೆ ಪರಿಣಾಮ ಬೀರಲು ಸಜ್ಜಾಗಿದೆ ಎಂದು ಐಐಎಸ್ ಸಿ ತಜ್ಞ ಪ್ರೋ ಆಶಿಶ್ ವರ್ಮಾ ತಿಳಿಸಿದ್ದಾರೆ.

ಇನ್ನೂ ಕರ್ನಾಟಕ ವಾಯುಮಾಲಿನ್ಯ ಮಂಡಳಿಯೂ ನೀಡಿದ ಏರ್ ಕ್ಯಾಲಿಟಿ ಮಾನಿಟರಿಂಗ್ ಸೆಂಟರ್ ಪ್ರಕಾರವೂ ಮಾಲಿನ್ಯ ಮಟ್ಟ ಹೆಚ್ಚಳವಾಗಿದೆ. ಮಂಡಳಿಯ, ಏರ್ ಕ್ವಾಲಿಟಿ ಮಾನಿಟರಿಂಗ್ ಅಧ್ಯಯನದ ಪ್ರಕಾರ, ಮೆಟ್ರೋ ಟಿಕೆಟ್‌ ಶುಲ್ಕ ಹೆಚ್ಚಳಕ್ಕೆ ಮುಂಚೆ, ಬೆಳಿಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಇರುವ ಸಮಯದಲ್ಲಿ ಸರಾಸರಿ PM 2.5 ಪ್ರತಿ ಘನ ಮೀಟರ್‌ಗೆ 43 ರಿಂದ 54 ಮೈಕ್ರೊಗ್ರಾಮ್ ಇತ್ತು. ಅದೇ ಫೆಬ್ರವರಿ 10 ರಂದು 112-114 ಮೈಕ್ರೊಗ್ರಾಂಗೆ ಏರಿಕೆಯಾಗಿದೆ.

ಇನ್ನು ಫೆಬ್ರವರಿ 17 ಮತ್ತು 24ರ ಸೋಮವಾರ ಈ ಮಟ್ಟ ಸರಾಸರಿ 68 ರಿಂದ 105 ಮೈಕ್ರೋಗ್ರಾಂಗೆ ತಲುಪಿದೆ. ಹೀಗೆ ವಾಯುಮಾಲಿನ್ಯ ಏರಿಕೆಯಾದರೆ ಆಸ್ತಮಾದಿಂದ ಕ್ಯಾನ್ಸರ್‌ ತನಕ ರೋಗಗಳನ್ನು ಉಂಟು ಮಾಡಬಲ್ಲದಾಗಿದೆ. ಹೀಗಾಗಿ ಈ ಪ್ರಮಾಣದಲ್ಲಿ ವಾಯುಮಾಲಿನ್ಯ ಮಟ್ಟ ಏರಿಕೆಯಾಗ್ತಿರೋದು ಆತಂಕವನ್ನುಂಟು ಮಾಡಿದೆ.

ಒಟ್ನಲ್ಲಿ ಮೆಟ್ರೋ ಹಾಗೂ ಬಸ್ ದರ ಏರಿಕೆ ಜನರು ಸ್ವಂತ ವಾಹನಗಳನ್ನು ಹೆಚ್ಚು ಬಳಸುವಂತೆ ಮಾಡಿದ್ದು, ರಾಜಧಾನಿಯ ವಾಯುಮಾಲಿನ್ಯ ಮಟ್ಟ ಹೆಚ್ಚಿಸಿದೆ. ಸರ್ಕಾರವೇ ಪಬ್ಲಿಕ್ ಟ್ರಾ‌ನ್ಸ್ಪೋರ್ಟ್ ಬಳಸಿ ಅಂತಾ ಪರಿಸರ ಕಾಳಜೆ ಸಂದೇಶ ನೀಡಿ, ಸಾರ್ವಜನಿಕ ಸಾರಿಗೆಗಳ ಚಾರ್ಜ್ ಡಬಲ್ ಮಾಡಿದರೆ, ಈಗ ಉಂಟಾಗಿರೋ ಸಂದರ್ಭಗಳೇ, ಮುನ್ಸೂಚನೆ ಸರ್ಕಾರ ಎಚ್ಚೆತ್ತುಕೊಳ್ಳೊಕೆ ಟ್ರಿಗರ್ ವಾರ್ನಿಂಗ್.

ಮಾರ್ಚ್ 12 ರಿಂದ 15ರವರೆಗೆ ಬೆಣಚುಕಲ್ಲು ಗ್ರಾಮದ ಲಕ್ಷ್ಮೀವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ

Leave a Reply

Your email address will not be published. Required fields are marked *