BBMP
Loading ...

Be

ತುಮಕೂರು: ಇದೇ ಗುರುವಾರದಂದು (ಮಾ.13) ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಬೆಣಚುಕಲ್ಲು ಗ್ರಾಮದ ಉದ್ದವಮೂರ್ತಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಸ್ವಸ್ತಿಶ್ರೀ ವಿಜಯಾಭ್ಯುದಯ ಶಕ ವರ್ಷಂಗಳು 1946ಕ್ಕೆ ಸರಿಯಾದ ಶ್ರೀ ಕ್ರೋಧಿನಾಮ ಸಂವತ್ಸರದ ಉತ್ತರಾಯಣ ಪಾಲ್ಗುಣ ಮಾಸ ಶುಕ್ಲಪಕ್ಷ ದಿನಾಂಕ: 13-03-2025ನೇ ಗುರುವಾರ ಪುಬ್ಬ ನಕ್ಷತ್ರ ಈ ಶುಭದಿನ ಮಧ್ಯಾಹ್ನ 12.18 ರಿಂದ 1-00 ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಬೆಣಚಕಲ್ಲು ಗ್ರಾಮದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವವನ್ನು ಎಲೆಕಡಕಲು ಗ್ರಾಮಸ್ಥರು ನಡೆಸಿಕೊಡಲಿದ್ದಾರೆ.

ಮಾರ್ಚ್​ 12ರ ಬುಧವಾರದಿಂದ ಮಾರ್ಚ್​ 15ರ ಶನಿವಾರದವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅನ್ನಸಂತರ್ಪಣೆಯನ್ನು ಸಹ ಏರ್ಪಡಿಸಲಾಗಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.

ಈ ಉತ್ಸವದ ಅಧ್ಯಕ್ಷತೆಯನ್ನು ಕುಣಿಗಲ್​ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಹೆಚ್​.ಡಿ. ರಂಗನಾಥ ಹಾಗೂ ಕುಣಿಗಲ್​ ತಾಲೂಕಿನ ತಹಸೀಲ್ದಾರರಾದ ಶ್ರೀಮತಿ ರಶ್ಮಿ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದ ಸಂಪೂರ್ಣ ವಿವರಗಳು ಈ ಕೆಳಕಂಡಂತಿವೆ….

Leave a Reply

Your email address will not be published. Required fields are marked *