BBMP
Loading ...

Cooking oil

Greater Bengaluru News9 : ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಿಸಿ ಇದೀಗ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆಗೆ ತಟ್ಟಿದೆ. ಮಾರುಕಟ್ಟೆಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೇ ಸೈಲೆಂಟ್ ಆಗಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ.

ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಪ್ರತಿ ಲೀಟರ್ ಅಡುಗೆ ಎಣ್ಣೆಯ ಮೇಲೆ 4 ರಿಂದ 5 ರೂಪಾಯಿಗಳವರೆಗೆ ದಿಢೀರ್ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ತೀವ್ರತೆ ಕಡಿಮೆಯಾಗದೇ ಹೋದರೆ, ಮುಂಬರುವ ವಾರದಲ್ಲಿ ಪ್ರತಿ ಲೀಟರ್ ಎಣ್ಣೆ ಮೇಲೆ ಬರೋಬ್ಬರಿ 10 ರಿಂದ 15 ರೂಪಾಯಿಗಳವರೆಗೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಯಾವ ಬ್ರ್ಯಾಂಡ್ ಎಣ್ಣೆ ಬೆಲೆ ಎಷ್ಟು ಏರಿಕೆಯಾಗಿದೆ?

  • ಗೋಲ್ಡ್ ವಿನ್ನರ್ (Gold Winner): ಕಳೆದ ವಾರ ಒಂದು ಲೀಟರ್‌ಗೆ 161 ರೂ. ಇತ್ತು. ಈ ವಾರ 165 ರೂ.ಗೆ ಏರಿಕೆಯಾಗಿದೆ.
  • ಸನ್ ಫ್ಯೂರ್ (Sunpure): ಕಳೆದ ವಾರ ಒಂದು ಲೀಟರ್‌ಗೆ 161 ರೂ. ಇತ್ತು, ಈ ವಾರ 165 ರೂ. ಆಗಿದೆ.
  • ಫಾರ್ಚೂನ್ (Fortune): ಕಳೆದ ವಾರ ಒಂದು ಲೀಟರ್‌ಗೆ 152 ರೂ. ಇತ್ತು, ಈ ವಾರ 157 ರೂ.ಗೆ ತಲುಪಿದೆ.
  • ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಗಳ ಮೇಲೂ ಸರಾಸರಿ 4 ರಿಂದ 5 ರೂಪಾಯಿಗಳವರೆಗೆ ದರ ಏರಿಕೆ ಮಾಡಲಾಗಿದೆ.

ಯುದ್ಧದ ನೆಪ ಹೇಳಿ ದಿಢೀರ್ ಬೆಲೆ ಹೆಚ್ಚಿಸಿದ್ರಾ ವರ್ತಕರು?
ಅಡುಗೆ ಎಣ್ಣೆ ಬೆಲೆ ಏರಿಕೆಯ ಹಿಂದೆ ವರ್ತಕರ ಕೈವಾಡವಿದೆ ಎಂಬ ಅನುಮಾನಗಳು ದಟ್ಟವಾಗಿವೆ. ಮಾರುಕಟ್ಟೆಯಲ್ಲಿ ಮತ್ತು ಗೋದಾಮುಗಳಲ್ಲಿ ಇನ್ನೂ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ಅಡುಗೆ ಎಣ್ಣೆಯ ಸಂಗ್ರಹ (Stock) ಇದೆ. ದಾಸ್ತಾನು ಇದ್ದರೂ ಸಹ, ಕೇವಲ ಯುದ್ಧದ ನೆಪ ಹೇಳಿ ವರ್ತಕರು ಉದ್ದೇಶಪೂರ್ವಕವಾಗಿ ಬೆಲೆ ಏರಿಕೆ ಮಾಡಿ ಕಾಸು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಿಕ್ಕ ಅವಕಾಶವನ್ನು ಬಳಸಿಕೊಂಡು ಕೃತಕ ಅಭಾವ ಸೃಷ್ಟಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾರುಕಟ್ಟೆಯತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *