State Budget 2026: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಯನ್ನು ಆರಂಭಿಸಿದ್ದಾರೆ. ಪಂಚ ಗ್ಯಾರಂಟಿಗಳ ಭಾರ ಹೊತ್ತು, ರೈತ-ಮಹಿಳೆಯರ-ಯುವಕರ ನಿರೀಕ್ಷೆಗಳನ್ನು ಈಡೇರಿಸುವ ಭರವಸೆಯೊಂದಿಗೆ 4 ಲಕ್ಷ ಕೋಟಿ ದಾಟುವ ಸಾಧ್ಯತೆಯ ಈ ರಾಜ್ಯ ಬಜೆಟ್, ರಾಜ್ಯದ ಭವಿಷ್ಯವನ್ನೇ ಬದಲಾಯಿಸಬಹುದು. ಬೆಂಗಳೂರಿನ ರಸ್ತೆಗಳಿಂದ ಹಿಡಿದು ಗ್ರಾಮ-ಗ್ರಾಮಾಂತರದವರೆಗೆ ಎಲ್ಲರ ಕಣ್ಣು ಇಂದು ಪ್ರಮುಖ ಘೋಷಣೆಗಳ ಮೇಲೆ ಇದೆ. ಹೊಸ ಯೋಜನೆಗಳು, ತೆರಿಗೆ ಸಡಿಲಿಕೆ, ಮೂಲಸೌಕರ್ಯ ಬೂಸ್ಟ್… ಏನೆಲ್ಲಾ ಬರುತ್ತಿದೆ? ಲೈವ್ ಅಪ್‌ಡೇಟ್‌ಗಳಿಗಾಗಿ ಜೊತೆಯಿರಿ.


