ಬೆಂಗಳೂರು: ಮುಂಬರುವ ಬೆಂಗಳೂರು ವಕೀಲರ ಸಂಘದ 2025-2028ನೇ ಸಾಲಿನ ಚುನಾವಣೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ವಿಭಾಗದಿಂದ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಅಡ್ವೋಕೇಟ್ ಹೆಚ್. ಎಂ. ತೇಜಸ್ವಿಗೌಡ ಅವರು ಸ್ಪರ್ಧಿಸುತ್ತಿದ್ದು, ಅವರಿಗೆ ಮತ ನೀಡುವಂತೆ ಕೋರಿದ್ದಾರೆ.

ಒಳ್ಳೆಯ ವ್ಯಕ್ತಿಗಳು ಇರುವ ಕಡೆ ಒಳ್ಳೆಯ ಕೆಲಸಗಳೇ ನಡೆಯುತ್ತವೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ವಕೀಲ ವೃತ್ತಿ ಮಾಡುತ್ತಿರುವ ತೇಜಸ್ವಿ ಗೌಡ ಅವರು ತಮ್ಮ ನಡೆ ನುಡಿಯಿಂದಲೇ ಬಹುತೇಕರಿಗೆ ಬೇಕಾದಂತಹ ವ್ಯಕ್ತಿಯಾಗಿದ್ದಾರೆ. ಯಾರೊಂದಿಗೂ ಸಿಡುಕದೇ ನಯವಿನಯದಿಂದಲೇ ಮಾತನಾಡಿಸುವ ತೇಜಸ್ವಿ ಗೌಡ ಅವರು ಮಾನವೀಯ ಗುಣ ಹೊಂದಿರುವ ವ್ಯಕ್ತಿ.

ಪ್ರಸ್ತುತ ನ್ಯಾಯವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಿರುವ ಅವರ ಕೈಯನ್ನು ಇನ್ನಷ್ಟು ಬಲಪಡಿಸಲು ಮುಂಬರುವ ಬೆಂಗಳೂರು ವಕೀಲರ ಸಂಘದ 2025-2028ನೇ ಸಾಲಿನ ಚುನಾವಣೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ವಿಭಾಗದಿಂದ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಅವರನ್ನು ಗೆಲ್ಲಿಸಬೇಕಾಗಿದೆ. ಹೀಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ಅವರಿಗೆ ತಪ್ಪದೇ ನೀಡಿ.

ಸಿಟಿ ಸಿವಿಲ್ ಕೋರ್ಟ್ ವಿಭಾಗದಿಂದ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಆಯ್ಕೆಯಾಗುವ ಭರವಸೆ ಹೊಂದಿರುವ ತೇಜಸ್ವಿ ಗೌಡ ಅವರು ತಮ್ಮೆಲ್ಲರ ಅತ್ಯಮೂಲ್ಯವಾದ ಮತಗಳನ್ನು ನೀಡಿ ಬೆಂಬಲಿಸಿ ಆಶೀರ್ವದಿಸಬೇಕೆಂದು ಕೋಡಿದ್ದಾರೆ.



