BBMP
Loading ...

Police (1)

Greater Bengaluru News9 : ಪ್ರಕರಣದ ಒಂದರ ಬಿ ರಿಪೋರ್ಟ್ ಹಾಕಲು ವ್ಯಕ್ತಿಯೊಬ್ಬರಿಂದ 70 ಸಾವಿರ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿಎಸ್‌ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶಪ್ಪಗೆ ಜಿಲ್ಲಾ 3ನೇ ಸತ್ರ ನ್ಯಾಯಾಲಯದ ನೀಡಿದ್ದ ಮಧ್ಯಂತರ ಜಾಮೀನು ವಜಾಗೊಳಿಸಿದೆ.

ಮಾ.3 ರಂದು ಪಿಎಸ್‌ಐ ಶರಣಪ್ಪ ಹಾಗೂ ಎಎಸ್‌ಐ 70 ಸಾವಿರ ಲಂಚ ಸ್ವೀಕರಿಸಿದ ಆರೋಪದಡಿ ಲೋಕಾಯುಕ್ತ ಪೊಲೀಸರು ತಮ್ಮ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದರು. ಅಂದು ನ್ಯಾಯಾಧೀಶರು ಮಧ್ಯಂತರ ಜಾಮೀನು ಮಂಜೂರು ಮಾಡಿದ್ದರು.

ಆದರೆ ಲೋಕಾಯುಕ್ತ ಪೊಲೀಸರು ಜಾಮೀನು ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಶನಿವಾರ ಮತ್ತೆ ಪ್ರಕರಣದ ವಿಚಾರಣೆ ನಡೆದು ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸೋಮವಾರ ಅಂತಿಮ ತೀರ್ಪು ನೀಡುವುದಾಗಿ ಪ್ರಕಟಿಸಿದ್ದರು. ಇದೀಗ ನ್ಯಾಯಾಧೀಶರ ತೀರ್ಪು ಹೊರ ಬಿದ್ದಿದೆ. ಮಧ್ಯಂತರ ಜಾಮೀನು ರದ್ದುಗೊಳಿಸಿ ಲೋಕಾಯುಕ್ತರ ವಶಕ್ಕೆ ಪಿಎಸ್‌ಐ ಹಾಗೂ ಎಎಸ್ ಐ ಅವರನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Leave a Reply

Your email address will not be published. Required fields are marked *