ಕಾಮಾಕ್ಷಿಪಾಳ್ಯ ಠಾಣೆಯ ಎಎಸ್‌ಐ ಶಿವಶಂಕರ್ ಚಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗುರುವಾರ ( ಅ.17) ಬೆಳಗ್ಗೆ ಎಂದಿನಂತೆ ಶಿವಶಂಕರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ರೌಂಡ್ಸ್‌ಗೆಂದು ತೆರಳುವ ಸಂದರ್ಭ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ತಕ್ಷಣವೇ ಶಿವಶಂಕರ್ ಚಾರಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹೃದಯಾಘಾತದಿಂದ ಶಿವಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶಿವಶಂಕರ್ ಚಾರಿ 1999ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಕಳೆದ ಒಂದೂವರೆ ವರ್ಷದಿಂದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಲಾಂಗ್ ಪೆಂಡಿಂಗ್ ಕೇಸ್ ಪತ್ತೆ ಹಚ್ಚೋದ್ರಲ್ಲಿ ಶಿವ ಶಂಕರಚಾರಿ ಎಕ್ಸ್ಪರ್ಟ್ ಆಗಿದ್ದರು ಎನ್ನಲಾಗಿದೆ. ಮೃತರ ಸಾವಿಗೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.
ಬೆಂಗಳೂರು ಮಳೆ ಅವಾಂತರ: ನಿದ್ರೆಯಿಂದ ಎಚ್ಚರಗೊಳ್ಳದ ಬಿಬಿಎಂಪಿ, ಜಾಲತಾಣದಲ್ಲಿ ಬೆಂಗಳೂರಿಗರ ಆಕ್ರೋಶ


