BBMP
Loading ...

Darshan

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಅಲ್ಲದೆ ಜಾಮೀನು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಇದೇ ಅಕ್ಟೋಬರ್ 22ರಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇದರ ಮಧ್ಯನಟ ದರ್ಶನ್ ವಿರುದ್ಧದ ಹಳೆ ಕೇಸಿಗೆ ಮತ್ತೆ ಮರುಜೀವ ಬಂದಿದೆ. ನಿರ್ಮಾಪಕ ಭರತಗೆ ಕರೆ ಮಾಡಿ ದರ್ಶನ್ ಬೆದರಿಕೆ ಹಾಕಿದ್ದ ಕೆಸ್ ಇದೀಗ ಮರುಜೀವ ಪಡೆದುಕೊಂಡಿದೆ. ಈ ಕುರಿತಂತೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎನ್ ಸಿ ಆರ್ ದಾಖಲಾಗಿದೆ.

2022 ಆಗಸ್ಟ್ ನಲ್ಲಿ ಕೆಂಗೇರಿ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿತ್ತು.ನಟ ಧ್ರುವನ್ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿತ್ತು.ಸಿನಿಮಾ ವಿಚಾರವಾಗಿ ನಟ ದರ್ಶನ್ ಬಳಿ ದ್ರುವನ್ ಹೋಗಿದ್ದರು. ದರ್ಶನ್ ಮೂಲಕ ನಿರ್ಮಾಪಕ ಭರತ್ಗೆ ದ್ರುವಂತ್ ಕರೆ ಮಾಡಿಸಿದ್ದರು. ಸಿನಿಮಾ ಚಿತ್ರೀಕರಣ ಮುಗಿಸದಿದ್ದರೆ ನೀನೇ ಇರುವುದಿಲ್ಲ ಅಂತ ದರ್ಶನ್ ಬೆದರಿಕೆ ಹಾಕಿದ್ದಾರೆ.

ನಿರ್ಮಾಪಕ ಭರತ್ ಗೆ ಕರೆ ಮಾಡಿ ದರ್ಶನ್ ಬೆದರಿಕೆ ಹಾಕಿದ್ದ ಆರೋಪ ಕೇಳಿಬಂದಿದ್ದು, ಇದೇ ವಿಚಾರವಾಗಿ ನಿರ್ಮಾಪಕ ಭರತ್ ಕೆಂಗೇರಿ ಠಾಣೆಗೆ ಅಂದು ದೂರು ನೀಡಿದ್ದರು. ಧ್ರುವನ್ ದರ್ಶನ್ ಬಳಿ ಹೋಗಿ ಬೆದರಿಕೆ ಹಾಕಿಸಿದ್ದಾನೆಂದು ಎಂಸಿಆರ್ ದಾಖಲಾಗಿತ್ತು.ಆದರೆ ಪೊಲೀಸರು ಧ್ರುವ ಮತ್ತು ದರ್ಶನ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ.

ಇದೀಗ ಬೆದರಿಕೆ ಆರೋಪದಡಿ ಧ್ರುವನ್ ಅಲಿಯಾಸ್ ಸೂರಜ್ ಕುಮಾರ್ ನಟ ದರ್ಶನ್ ಹಾಗೂ ದರ್ಶನ್ ಮ್ಯಾನೇಜರ್ ನಾಗರಾಜ್ ವಿರುದ್ಧ ಮತ್ತೆ ಎನ್ಸಿಆರ್ ದಾಖಲಾಗಿದೆ. ನಿರ್ಮಾಪಕ ಭರತ್ ಭಗವಾನ್ ಶ್ರೀ ಕೃಷ್ಣ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಕೋವಿಡ್ ಸಮಯದಲ್ಲಿ ಅರ್ಧಕ್ಕೆ ಸಿನಿಮಾ ಚಿತ್ರೀಕರಣ ನಿಂತು ಹೋಗಿತ್ತು. ಇದೇ ವಿಚಾರವಾಗಿ ಚಿತ್ರದ ನಾಯಕ ನಟ ದ್ರವ ದರ್ಶನ್ ಬಳಿ ಹೋಗಿದ್ದರು. ಈ ವೇ ದರ್ಶನ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಇದೀಗ ಮತ್ತೆ ಹೊಸದಾಗಿ ಏನ್ ಸಿ ಆರ್ ದಾಖಲಾಗಿದೆ.

ಹೃದಯಾಘಾತದಿಂದ ಕಾಮಾಕ್ಷಿಪಾಳ್ಯ ಠಾಣೆಯ ಎಎಸ್‌ಐ ಶಿವಶಂಕರ್ ಚಾರಿ ನಿಧನ

Leave a Reply

Your email address will not be published. Required fields are marked *