ಕೊಪ್ಪಳ: ಲಂಚ, ವಂಚನೆ ಈ ಸರ್ಕಾರಿ ಕಚೇರಿಗಳಲ್ಲಿದಿನದಲ್ಲಿ ನಡೆಯುತ್ತಿರುತ್ತದೆ. ಇದನ್ನು ಮಟ್ಟಹಾಕಲೆಂದೇ ಲೋಕಾಯುಕ್ತ ಪೊಲೀಸರು ಕೂಡ ತನಿಖೆ ನಡೆಸುತ್ತಲೇ ಇರುತ್ತಾರೆ. ಇದೀಗ ಸಹಕಾರಿ ಸಂಘಗಳ ಉಪ ನಿಬಂಧಕ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತರ ಬಲೆಗೆ ಸರ್ಕಾರಿ ಅಧಿಕಾರಿ!
ದಸ್ತಗಿರಿ ಅಲಿ ಎಂಬ ಸಹಕಾರಿ ಸಂಘಗಳ ಉಪ ನಿಬಂಧಕ ಅಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾರೆ. ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರೋ ಕಚೇರಿಯಲ್ಲಿ ಎನ್ ಜಿ ಓ ಪ್ರಮಾಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಈ ವೇಳೆ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಕೊಪ್ಪಳ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲಂಚ ನೋಟನ್ನು ನುಂಗಿದ ಅಧಿಕಾರಿ!
ಈ ಅಧಿಕಾರಿ ಲಂಚಕ್ಕೆ ಬೇಡಿಕೆಯಿಟ್ಟಿದ್ದು ಮಾತ್ರವಲ್ಲದೇ, ಎರಡು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದರು. ಈ ವೇಳೆ ಅಧಿಕಾರಿಗಳು ತಕ್ಷಣ ಅಧಿಕಾರಿಯನ್ನು ಹಿಡಿದಿದ್ದಾರೆ. ಆದ್ರೆ ಪೊಲೀಸರು ಹಿಡಿಯುತ್ತಿದ್ದಂತೆ ದಸ್ತಗಿರಿ ಅಲಿ ಅಧಿಕಾರಿ ತಕ್ಷಣ ಲಂಚ ಪಡೆದ ಹಣವನ್ನು ನುಂಗಿಬಿಟ್ಟಿದ್ದಾರೆ. ಆದರೆ ಲೋಕಾಯುಕ್ತ ಸಿಬ್ಬಂದಿ ಹರಸಾಹಸ ಪಟ್ಟು ನೋಟನ್ನು ಹೊರತೆಗೆಸಿದ್ದಾರೆ. ಇನ್ನು ಕೊಪ್ಪಳ ಲೋಕಾಯುಕ್ತ ಪಿಐ ನಾಗರತ್ನ ನೇತೃತ್ವದಲ್ಲಿ ಲೋಕಾ ದಾಳಿ ನಡೆಸಿದ್ದು, ರಾಯಚೂರು ಲೋಕಾಯುಕ್ತ ಎಸ್ಪಿ ಶಶಿದರ್ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ.


