BBMP
Loading ...

Greater Bengaluru News9 : ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು, ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಬೆಸ್ಕಾಂ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಾತ್ಕಾಲಿಕವಾಗಿ ಮೀಟರ್​ಗೆ 25 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ AEE ಮನೋಜ್​ ಕುಮಾರ್​​ ಲಾಕ್​ ಆಗಿದ್ದಾರೆ. ಮನೋಜ್ ಜೊತೆಗೆ ಕಾಂತರಾಜು ಎಂಬ ವಿದ್ಯುತ್ ಗುತ್ತಿಗೆದಾರ ಕೂಡ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಬೆಸ್ಕಾಂ ಕಚೇರಿಯಲ್ಲಿ AEE ಆಗಿರುವ ಮನೋಜ್ ಕುಮಾರ್​, ತಾತ್ಕಾಲಿಕವಾಗಿ ಮೀಟರ್‌ಗೆ 25 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆ ಮಾಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣವನ್ನು ವಿದ್ಯುತ್ ಗುತ್ತಿಗೆದಾರ ಕಾಂತರಾಜುಗೆ ನೀಡಲು AEE ಮನೋಜ್ ಕುಮಾರ್​ ಸೂಚನೆ ನೀಡಿದ್ದರು. ಈ ಬಗ್ಗೆ ದೂರುದಾರ ರಘುರಾಜ್‌ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರು ಬಂದ ಹಿನ್ನೆಲೆ ಲೋಕಾಯುಕ್ತ ಎಸ್​ಪಿ ಶಿವಪ್ರಕಾಶ್​​ ದೇವರಾಜ್​​ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, AEE ಮನೋಜ್ ಕುಮಾರ್ ಮತ್ತು ವಿದ್ಯುತ್ ಗುತ್ತಿಗೆದಾರ ಕಾಂತರಾಜು 50 ಸಾವಿರ ಹಣ ಪಡೆಯುವಾಗ‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರ ರಘುರಾಜ್​ನಿಂದ ಕಾಂತರಾಜುಗೆ ಹಣ ನೀಡುವಾಗ ಟ್ರ್ಯಾಪ್​ ಆಗಿದ್ದು, ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *