BBMP
Loading ...

Greater Bengaluru News9 : ಬೆಂಗಳೂರಿನಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿದೆ. ಕೈ ಕೈ ಮಿಲಾಯಿಸಿಕೊಂಡು ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಟ ನಡೆಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭಾರಿ ಹೊಡೆದಾಟ ನಡೆದಿದೆ.

ಒಬ್ಬರಿಗೊಬ್ಬರು ಬಡಿದಾಡಿಕೊಂಡು ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ಹಲವು ಮಂದಿ ಪದಾಧಿಕಾರಿಗಳನ್ನು ಮಜಾ ಮಾಡಿದ್ದರು. ವಜಾ ಮಾಡಿ ಆದೇಶಿಸಿದ್ದ ರಾಷ್ಟ್ರೀಯ ಯುವ ಕಾಂಗ್ರೆಸ್, ಅದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹೊಡೆದಾಡಿಕೊಂಡಿದ್ದಾರೆ. ಇವತ್ತು ರಾಜ್ಯ ಕಾರ್ಯಕಾರಣಿ ಸಭೆ ಇತ್ತು. ಈ ಒಂದು ಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಆಗಿರುವ ಮಂಜುನಾಥಗೌಡ ಹಾಗೂ ಉಪಾಧ್ಯಕ್ಷ ಸ್ಥಾನದಿಂದ ತೆರವಾದ ದೀಪಿಕಾ ರೆಡ್ಡಿ ಬೆಂಬಲಿಗರ ನಡುವೆ ಹೊಡೆದಾಟ ನಡೆದಿದೆ.

ಘಟನೆ ನಡೆದ ಸ್ಥಳಕ್ಕೆ ಹೈಗ್ರೌಂಡ್ ಠಾಣೆ ಪೋಲಿಸರು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಮಂಜುನಾಥ್ ಗೌಡ ಹಾಗು ದೀಪಿಕಾ ರೆಡ್ಡಿ ನಡುವೆ ಚರ್ಚೆ ನಡೆಯುತ್ತಿದೆ. ಮಂಜುನಾಥ್ ಗೌಡ ಸೂಚನೆ ಮೇರೆಗೆ ನಿನ್ನೆ ರಾಷ್ಟ್ರೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ವತಿಯಿಂದ ನಿನ್ನೆ ಸುಮಾರು 15ಕು ಹೆಚ್ಚು ಪದಾಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಇವತ್ತು ಕೂಡ ಸಭೆ ನಡೆಸಲಾಗುತ್ತಿತ್ತು ಈ ಒಂದು ಸಭೆ ನಡೆಯುತ್ತಿರುವಾಗಲೇ ಹೊಡೆದಾಟ ನಡೆದಿದೆ.

Leave a Reply

Your email address will not be published. Required fields are marked *