Greater Bengaluru News9 : ಬೆಂಗಳೂರಲ್ಲಿ ಪರಿಸರಕ್ಕೆ ಮಾರಕವಾಗಿರೋ ಏಕರೂಪ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಇದೆ. ಆದರೂ ಪ್ಲಾಸ್ಟಿಕ್ ನಿಯಂತ್ರಣ ಕಷ್ಟಸಾಧ್ಯವಾಗಿದ್ದು, ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರಲ್ಲಿ ನಡೆಯುವ ವಿವಾಹ ಮಹೋತ್ಸವ, ಸಮಾರಂಭಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಸುತ್ತಿದ್ದು, ಇದನ್ನು ತಡೆಯಲು ಜಿಬಿಎ ದಂಡದ ಮೊರೆ ಹೋಗಿದೆ.
ನಿಯಮ ಉಲ್ಲಂಘಿಸುವವರಿಗೆ ಆರಂಭದಲ್ಲಿ ₹3,500 ದಂಡ ವಿಧಿಸಲಾಗುವುದು. ಪದೇ ಪದೇ ನಿಯಮ ಉಲ್ಲಂಘಿಸಿದರೆ ಗರಿಷ್ಠ ₹5 ಲಕ್ಷದವರೆಗೆ ಫೈನ್ ಹಾಕಲಾಗುವುದು ಎಂಬ ಎಚ್ಚರಿಕೆ ರವಾನೆ ಮಾಡಿದೆ.
ಮದುವೆ ಸಮಾರಂಭಗಳು, ಕಲ್ಯಾಣ ಮಂಟಪಗಳು, ಕನ್ವೆನ್ಷನ್ ಸೆಂಟರ್ಗಳು ಮತ್ತು ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ಮಾರ್ಷಲ್ಗಳು ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಕಂಡು ಬಂದರೆ ಸ್ಪಾಟ್ ಫೈನ್ ಹಾಕೋಕೆ ಜಿಬಿಎ ನಿರ್ಧರಿಸಿದೆ.
ಪ್ಲಾಸ್ಟಿಕ್ ಮತ್ತು ಥರ್ಮಕೋಲ್ ತಟ್ಟೆಗಳು, ಲೋಟಗಳು, ಸ್ಫೂನ್ , ಫ್ಲೆಕ್ಸ್ಗಳು ಹಾಗೂ ಪ್ಲಾಸ್ಟಿಕ್ ಶೀಟ್ಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ನೀಡಲಾಗಿದೆ.
ಪ್ಲಾಸ್ಟಿಕ್ ಬದಲಿಗೆ ಬಾಳೆ ಎಲೆ, ಅಡಿಕೆ ತಟ್ಟೆ ಹಾಗೂ ಸ್ಟೀಲ್ ಲೋಟಗಳನ್ನು ಬಳಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು GBA ಮನವಿ ಮಾಡಿದೆ.


