BBMP
Loading ...

Monkey

Greater Bengaluru News9 : ವೃದ್ಧೆಯೊಬ್ಬರು ಮೃತಪಟ್ಟ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರದ ಬಳಿ ಕೋತಿಯೊಂದು ಕುಳಿತು ಕಣ್ಣೀರು ಸುರಿಸಿರುವ ಹೃದಯ ವಿದ್ರಾವಕ ಘಟನೆ ರಾಮನಗರದಲ್ಲಿ ನಡೆದಿದೆ. ಈ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್‌ ನಲ್ಲಿ ಚಿತ್ರೀಕರಿಸಿದ್ದು ಅದೀಗ ಎಲ್ಲೆಡೆ ವೈರಲ್‌ (Viral video) ಆಗಿದೆ.

ರಾಮನಗರದ ರಾಯರದೊಡ್ಡಿಯಲ್ಲಿ ಪಾರ್ವತಮ್ಮ (80) ಎಂಬ ವೃದ್ಧೆ ನಿಧರಾದಾಗ ಈ ಘಟನೆ ನಡೆದಿದೆ. ಮೂಲತಃ ಚನ್ನಪಟ್ಟಣದ ಬಿ.ವಿ. ಹಳ್ಳಿಯವರಾದ ಪಾರ್ವತಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು. ಪ್ರತಿದಿನ ಮನೆಯ ಬಳಿ ಬರುತ್ತಿದ್ದ ಕೋತಿಗೆ ಪಾರ್ವತಮ್ಮ ಪ್ರೀತಿಯಿಂದ ತಿನಿಸು ತಿಂಡಿ ನೀಡುತ್ತಿದ್ದರು. ಇಬ್ಬರ ನಡುವೆ ಬಾಂಧವ್ಯವೊಂದು ಬೆಳೆದಿತ್ತು.

ಮಾ. 31 ರ ಮಂಗಳವಾರ ಪಾರ್ವತಮ್ಮ ವಯೋಸಹಜವಾಗಿ ಸಾವನ್ನಪ್ಪಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕೋತಿಯು ಅಲ್ಲಿದ್ದ ಜನರು ಅಚ್ಚರಿಗೀಡಾಗುವಂತೆ ವರ್ತಿಸಿದ್ದು, ಶವದ ಮುಖದ ಬಳಿ ಮುಖವಿಟ್ಟು ಕಣ್ಣೀರು ಸುರಿಸಿದು. ಭಾವನೆಗಳು, ಶೋಕ ಸಂತಾಪಗಳು ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಇದೆ ಎಂದು ಕೋತಿ ಸಾಬೀತುಪಡಿಸಿದ್ದು ಅಲ್ಲಿದ್ದವರನ್ನು ವಿಸ್ಮಿತಗೊಳಿಸಿದೆ.

Leave a Reply

Your email address will not be published. Required fields are marked *