BBMP
Loading ...

IMG-20260129-WA0161

Greatger Bengaluru News9 : ಕೆ.ಪಿ. ಅಗ್ರಹಾರ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ.

ಚೀಟಿ ವ್ಯವಹಾರ ಸಂಬಂಧಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಸೇರಿಸುವಂತೆ ಬೆದರಿಸಿ 4 ಲಕ್ಷ ರೂ. ಲಂಚ ಪಡೆಯಲು ಯತ್ನಿಸುತ್ತಿದ್ದಾಗ, ಸಿರಸಿ ಸರ್ಕಲ್ ಬಳಿಯ ಕಾರ್ ಗ್ರೌಂಡ್ ಬಳಿ ರೆಡ್‌ಹ್ಯಾಂಡ್‌ನಲ್ಲಿ ಹಿಡಿಯಲಾಗಿದೆ.

ಈ ಕಾರ್ಯಾಚರಣೆ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ನೇತೃತ್ವದಲ್ಲಿ ನಡೆದಿದ್ದು, ಇನ್ಸ್‌ಪೆಕ್ಟರ್ ಗೋವಿಂದರಾಜು ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇನ್ಸ್‌ಪೆಕ್ಟರ್ ಲಂಚ ಹಣವನ್ನು ಸ್ವೀಕರಿಸುವ ವೇಳೆಗೆ ದಾಖಲೆ ಮಾಡಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಇನ್ಸ್‌ಪೆಕ್ಟರ್ ವಿರುದ್ಧ ದೋಷಪಟ್ಟಿ ದಾಖಲೆ ಮಾಡಿದ್ದು, ಪ್ರಕರಣದ ಹೆಚ್ಚಿನ ವಿವರಗಳು ಮುಂದಿನ ತನಿಖೆಯಲ್ಲಿ ಹೊರಬರುವಂತೆ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *