Greater Bengaluru News9 : ರಾಜ್ಯದ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಪೊಲೀಸ್ ಸಿಬ್ಬಂದಿಯ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ಸಾಂದರ್ಭಿಕ ರಜೆ ನೀಡುವಂತೆ ಡಿಜಿ ಸಲೀಂ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ನಿರಂತರ ಒತ್ತಡದ ಕೆಲಸ ನಿರ್ವಹಿಸುತ್ತಿದ್ದು, ಅವರ ವೈಯಕ್ತಿಕ ಜೀವನ ಹಾಗೂ ಕೆಲಸದ ನಡುವಿನ ಸಮತೋಲನಕ್ಕೆ ಈ ರಜೆ ಸಹಕಾರಿಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನ ಸಾಂದರ್ಭಿಕ ರಜೆ ನೀಡುವಂತೆ ಡಿಜಿ ಸಲೀಂ ಅವರು ಆದೇಶಿಸಿದ್ದಾರೆ.
ಈ ಕ್ರಮದಿಂದ ಪೊಲೀಸ್ ಸಿಬ್ಬಂದಿಯಲ್ಲಿ ಸಂತಸ ಹೆಚ್ಚಾಗಿದ್ದು, ಕಾರ್ಯಕ್ಷಮತೆಗೂ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.


