BBMP
Loading ...

UPI

Greater Bengaluru News9 : ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್​ ಯುಗದಲ್ಲಿ ಬಹುತೇಕರು ಡಿಜಿಟಲ್​ ಪೇಮೆಂಟ್ಸ್​ ಮೊರೆ ಹೋಗಿದ್ದಾರೆ. ರಸ್ತೆಬದಿ ವ್ಯಾಪಾರಿಯಿಂದ ಹಿಡಿದು ದೊಡ್ಡ ದೊಡ್ಡ ಮಳಿಗೆಗಳಲ್ಲಿ ಆನ್​ಲೈನ್ ಪಾವತಿಯ ಸ್ಕ್ಯಾನರ್​ಗಳು ಲಭ್ಯವಿವೆ. ಯುಪಿಐ ಪಾವತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಾಲ್ತಿಯಲ್ಲಿರುವುದೇ ಇದಕ್ಕೆ ಕಾರಣ. ​

ಈಗಿನ ಪರಿಸ್ಥಿತಿಗೆ ಹೋಲಿಸಿದರೆ, ಆನ್​ಲೈನ್​ ಪಾವತಿ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ ಎನ್ನುವಂತಾಗಿದೆ. ಯುಪಿಐ ಜನರ ಜೀವನದ ಒಂದು ಭಾಗವಾಗಿದೆ. ಆನ್​ಲೈನ್​ ಪಾವತಿ ಬಂದ ಬಳಿಕ, ಕೇವಲ ಒಂದು ಕ್ಲಿಕ್‌ನಲ್ಲಿ ಹಣವನ್ನು ಜಗತ್ತಿನ ಯಾವ ಮೂಲೆಗೆ ಬೇಕಾದರೂ ವರ್ಗಾಯಿಸಬಹುದು. ಆದಾಗ್ಯೂ, ಕೆಲವೊಮ್ಮೆ ಯುಪಿಐ ಮೂಲಕ ನಾವು ತಪ್ಪು ಸಂಖ್ಯೆಗೆ ಪೇಮೆಂಟ್​ ಮಾಡುತ್ತೇವೆ. ಆಗ ರಿಫಂಡ್​ ಪಡೆಯುವುದು ಹೇಗೆ? ಎಂಬ ಗೊಂದಲ ಕಾಡಲಾರಂಭಿಸುತ್ತದೆ.

ಅಷ್ಟಕ್ಕೂ ಇನ್ನು ಮುಂದೆ ಈ ಅಪಾಯದ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಕಾರಣ, ಇತ್ತೀಚೆಗೆ ಆರ್​ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಉಲ್ಲೇಖಿಸಲಾದ ನಿಯಮಗಳನ್ನು ನೀವು ಅನುಸರಿಸಿದರೆ, ನಿಮ್ಮ ತಪ್ಪಾಗಿ ತಪ್ಪು ಸಂಖ್ಯೆಗೆ ಕಳುಹಿಸಿದ ಹಣವನ್ನು ಸುಲಭವಾಗಿ ಮರಳಿ ಪಡೆಯಬಹುದು. ಆ ನಿಯಮಗಳು ಯಾವುವು? ಪ್ರಕ್ರಿಯೆ ಹೇಗೆ? ಎಂಬುದರ ವಿವರ ಈ ಕೆಳಕಂಡಂತಿದೆ ಅನುಸರಿಸಿ.

ಹೀಗಿವೆ ನಿಯಮಗಳು

  • ಮೊದಲು, ನೀವು ತಪ್ಪಾಗಿ ಪಾವತಿ ಮಾಡಲು ಬಳಸಿದ ಐಡಿ ಅಥವಾ ಸಂಖ್ಯೆಯನ್ನು ಸಂಪರ್ಕಿಸಿ. ಪೇಮೆಂಟ್​ ಸ್ಕ್ರೀನ್‌ಶಾಟ್ ಅನ್ನು ಅವರಿಗೆ ಕಳುಹಿಸುವ ಮೂಲಕ ನೀವು ಮರುಪಾವತಿಯನ್ನು ಕೋರಬಹುದು.
  • ಹಣವನ್ನು ಪಡೆದ ಗ್ರಾಹಕರು ಮರುಪಾವತಿಯನ್ನು ನಿರಾಕರಿಸಿದರೆ, ನೀವು ಟೋಲ್-ಫ್ರೀ ಸಂಖ್ಯೆ 1800-120-1740ಗೆ ಕರೆ ಮಾಡುವ ಮೂಲಕ ದೂರು ಸಲ್ಲಿಕೆ ಮಾಡಬಹುದು.
  • ಇದರ ಹೊರತಾಗಿ, ನೀವು ಪಾವತಿ ಮಾಡಿದ ಯುಪಿಐ ಆಧಾರಿತ ಅಪ್ಲಿಕೇಶನ್‌ನ ಗ್ರಾಹಕ ಸೇವಾ ಸಹಾಯದೊಂದಿಗೆ ಮಾತನಾಡಿ, ನಿಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.
  • ತಪ್ಪಾದ ಯುಪಿಐ ಪಾವತಿಯ ಬಗ್ಗೆ ನೀವು ನಿಮ್ಮ ಬ್ಯಾಂಕ್ ಅನ್ನು ಸಹ ಸಂಪರ್ಕಿಸಬಹುದು. ಅವರು ಮರುಪಾವತಿ ಪಡೆಯಲು ನಿಮಗೆ ಸಹಾಯ ಮಾಡಬಹುದು.
  • ಆನ್​ಲೈನ್​ ವಹಿವಾಟುಗಳನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ನಿರ್ವಹಿಸುತ್ತದೆ. ಆದ್ದರಿಂದ, ನೀವು ಎನ್​ಪಿಸಿಐಗೆ ದೂರು ಸಲ್ಲಿಸಬಹುದು.

ನೀವು ಆರ್​ಬಿಐ ಸೂಚಿಸಿದ ಈ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ, ನೀವು ಮಾಡಿದ ತಪ್ಪು ಪೇಮೆಂಟ್​ ಅನ್ನು ಯಶಸ್ವಿಯಾಗಿ ಮರುಪಡೆಯಲು ಅವಕಾಶವಿದೆ ಎಂದು ಅನೇಕ ವಿಶ್ಲೇಷಕರು ಹೇಳುತ್ತಾರೆ,(ಏಜೆನ್ಸೀಸ್).

Leave a Reply

Your email address will not be published. Required fields are marked *