Greater Bengaluru News9 : ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಯುಗದಲ್ಲಿ ಬಹುತೇಕರು ಡಿಜಿಟಲ್ ಪೇಮೆಂಟ್ಸ್ ಮೊರೆ ಹೋಗಿದ್ದಾರೆ. ರಸ್ತೆಬದಿ ವ್ಯಾಪಾರಿಯಿಂದ ಹಿಡಿದು ದೊಡ್ಡ ದೊಡ್ಡ ಮಳಿಗೆಗಳಲ್ಲಿ ಆನ್ಲೈನ್ ಪಾವತಿಯ ಸ್ಕ್ಯಾನರ್ಗಳು ಲಭ್ಯವಿವೆ. ಯುಪಿಐ ಪಾವತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಾಲ್ತಿಯಲ್ಲಿರುವುದೇ ಇದಕ್ಕೆ ಕಾರಣ.
ಈಗಿನ ಪರಿಸ್ಥಿತಿಗೆ ಹೋಲಿಸಿದರೆ, ಆನ್ಲೈನ್ ಪಾವತಿ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ ಎನ್ನುವಂತಾಗಿದೆ. ಯುಪಿಐ ಜನರ ಜೀವನದ ಒಂದು ಭಾಗವಾಗಿದೆ. ಆನ್ಲೈನ್ ಪಾವತಿ ಬಂದ ಬಳಿಕ, ಕೇವಲ ಒಂದು ಕ್ಲಿಕ್ನಲ್ಲಿ ಹಣವನ್ನು ಜಗತ್ತಿನ ಯಾವ ಮೂಲೆಗೆ ಬೇಕಾದರೂ ವರ್ಗಾಯಿಸಬಹುದು. ಆದಾಗ್ಯೂ, ಕೆಲವೊಮ್ಮೆ ಯುಪಿಐ ಮೂಲಕ ನಾವು ತಪ್ಪು ಸಂಖ್ಯೆಗೆ ಪೇಮೆಂಟ್ ಮಾಡುತ್ತೇವೆ. ಆಗ ರಿಫಂಡ್ ಪಡೆಯುವುದು ಹೇಗೆ? ಎಂಬ ಗೊಂದಲ ಕಾಡಲಾರಂಭಿಸುತ್ತದೆ.
ಅಷ್ಟಕ್ಕೂ ಇನ್ನು ಮುಂದೆ ಈ ಅಪಾಯದ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಕಾರಣ, ಇತ್ತೀಚೆಗೆ ಆರ್ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಉಲ್ಲೇಖಿಸಲಾದ ನಿಯಮಗಳನ್ನು ನೀವು ಅನುಸರಿಸಿದರೆ, ನಿಮ್ಮ ತಪ್ಪಾಗಿ ತಪ್ಪು ಸಂಖ್ಯೆಗೆ ಕಳುಹಿಸಿದ ಹಣವನ್ನು ಸುಲಭವಾಗಿ ಮರಳಿ ಪಡೆಯಬಹುದು. ಆ ನಿಯಮಗಳು ಯಾವುವು? ಪ್ರಕ್ರಿಯೆ ಹೇಗೆ? ಎಂಬುದರ ವಿವರ ಈ ಕೆಳಕಂಡಂತಿದೆ ಅನುಸರಿಸಿ.
ಹೀಗಿವೆ ನಿಯಮಗಳು
- ಮೊದಲು, ನೀವು ತಪ್ಪಾಗಿ ಪಾವತಿ ಮಾಡಲು ಬಳಸಿದ ಐಡಿ ಅಥವಾ ಸಂಖ್ಯೆಯನ್ನು ಸಂಪರ್ಕಿಸಿ. ಪೇಮೆಂಟ್ ಸ್ಕ್ರೀನ್ಶಾಟ್ ಅನ್ನು ಅವರಿಗೆ ಕಳುಹಿಸುವ ಮೂಲಕ ನೀವು ಮರುಪಾವತಿಯನ್ನು ಕೋರಬಹುದು.
- ಹಣವನ್ನು ಪಡೆದ ಗ್ರಾಹಕರು ಮರುಪಾವತಿಯನ್ನು ನಿರಾಕರಿಸಿದರೆ, ನೀವು ಟೋಲ್-ಫ್ರೀ ಸಂಖ್ಯೆ 1800-120-1740ಗೆ ಕರೆ ಮಾಡುವ ಮೂಲಕ ದೂರು ಸಲ್ಲಿಕೆ ಮಾಡಬಹುದು.
- ಇದರ ಹೊರತಾಗಿ, ನೀವು ಪಾವತಿ ಮಾಡಿದ ಯುಪಿಐ ಆಧಾರಿತ ಅಪ್ಲಿಕೇಶನ್ನ ಗ್ರಾಹಕ ಸೇವಾ ಸಹಾಯದೊಂದಿಗೆ ಮಾತನಾಡಿ, ನಿಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.
- ತಪ್ಪಾದ ಯುಪಿಐ ಪಾವತಿಯ ಬಗ್ಗೆ ನೀವು ನಿಮ್ಮ ಬ್ಯಾಂಕ್ ಅನ್ನು ಸಹ ಸಂಪರ್ಕಿಸಬಹುದು. ಅವರು ಮರುಪಾವತಿ ಪಡೆಯಲು ನಿಮಗೆ ಸಹಾಯ ಮಾಡಬಹುದು.
- ಆನ್ಲೈನ್ ವಹಿವಾಟುಗಳನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ನಿರ್ವಹಿಸುತ್ತದೆ. ಆದ್ದರಿಂದ, ನೀವು ಎನ್ಪಿಸಿಐಗೆ ದೂರು ಸಲ್ಲಿಸಬಹುದು.
ನೀವು ಆರ್ಬಿಐ ಸೂಚಿಸಿದ ಈ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ, ನೀವು ಮಾಡಿದ ತಪ್ಪು ಪೇಮೆಂಟ್ ಅನ್ನು ಯಶಸ್ವಿಯಾಗಿ ಮರುಪಡೆಯಲು ಅವಕಾಶವಿದೆ ಎಂದು ಅನೇಕ ವಿಶ್ಲೇಷಕರು ಹೇಳುತ್ತಾರೆ,(ಏಜೆನ್ಸೀಸ್).


