BBMP
Loading ...

Khata

Greater Bengaluru News9 : ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಕೆಲವು ಪ್ರಮುಖ ನಗರಗಳಲ್ಲಿ ಬಿ – ಖಾತಾದಿಂದ ಎ – ಖಾತಾ ಪರಿವರ್ತನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಅವಕಾಶ ನೀಡಿದೆ. ಆದರೆ, ಬಿ ಖಾತಾ ಪರಿವರ್ತನೆಗೆ ಇ – ಖಾತಾ ಕಡ್ಡಾಯ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಎಲ್ಲಾ ಆಸ್ತಿಗಳ ಖರೀದಿ ಹಾಗೂ ಮಾರಾಟಕ್ಕೆ ಇ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಲಕ್ಷಾಂತರ ಜನ ಆಸ್ತಿದಾರರಿಗೆ ಇನ್ನೂ ಇ ಖಾತಾ ಸೌಲಭ್ಯ ಸಿಕ್ಕಿಲ್ಲ. ಇದೀಗ ಬಿ ಖಾತಾ ಪಡೆದುಕೊಳ್ಳುವುದುಕ್ಕೆ ಆಸ್ತಿಗಳಿಗೆ ಇ ಖಾತಾ ಆಗಿರುವುದು ಕಡ್ಡಾಯ ಎನ್ನಲಾಗಿದೆ.

ಬೆಂಗಳೂರು ಸೇರಿ ಕರ್ನಾಟಕದಲ್ಲಿ ಅಂದಾಜು 30ರಿಂದ 40 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಗುಡ್‌ನ್ಯೂಸ್ ನೀಡಿದೆ. ಈಗಾಗಲೇ ಸಾವಿರಾರು ಜನ ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಂಡಿದ್ದು, ಆಸ್ತಿ ಬೆಲೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಬಿ ಖಾತಾದಿಂದ ಎ ಖಾತಾ ಅವಕಾಶ ನೀಡಿರುವುದು ಲಕ್ಷಾಂತರ ಜನ ಆಸ್ತಿದಾರರಿಗೆ ವರದಾನವಾಗಿ ಬದಲಾಗಿದೆ. ಅಲ್ಲದೇ ಬಿ- ಖಾತಾ ಎ ಖಾತಾ ಪರಿವರ್ತನೆಯು ರಿಯಲ್ ಎಸ್ಟೇಟ್‌ಗೂ ಬೂಸ್ಟ್ ನೀಡಿದೆ. ಬಿ ಖಾತಾ ಪರಿವರ್ತನೆಯು ರಿಯಲ್ ಎಸ್ಟೇಟ್‌ನಲ್ಲಿ ಆಸ್ತಿಗಳ ಬೆಲೆ ದುಪ್ಪಟ್ಟಾಗಿದೆ.

ಬಿ ಖಾತಾ ದಿಂದ ಎ ಖಾತಾ ಪರಿವರ್ತನೆ ಅಭಿಯಾನವನ್ನು ರಾಜ್ಯ ಸರ್ಕಾರವು ಹಮ್ಮಿಕೊಂಡಿದೆ. ಖಾತಾ ಪರಿವರ್ತನೆಗೆ 100 ದಿನಗಳ ಅಭಿಯಾನವನ್ನು ರಾಜ್ಯ ಸರ್ಕಾರವು ಆಯೋಜನೆ ಮಾಡಿದೆ. ಅಲ್ಲದೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬಿ ಖಾತಾದಿಂದ ಎಖಾತಾ ಪರಿವರ್ತನೆಗೆ ಇ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಈ ನಿಯಮವು ಹಲವರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಅಲ್ಲದೇ ಇಲ್ಲಿಯ ವರೆಗೆ ಇ ಖಾತಾ ಮಾಡಿಕೊಳ್ಳದ ಆಸ್ತಿದಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ.

ರಾಜ್ಯ ಸರ್ಕಾರವು ಬಿ ಖಾತಾಗೆ ಸಂಬಂಧಿಸಿದಂತೆ ಹೊರಡಿಸಿರುವ ಮಾರ್ಗಸೂಚಿಯ ಅನುಸಾರ, 21,527 ಚದರ ಅಡಿವರೆಗಿನ ಬಿ-ಖಾತಾ ಪ್ಲಾಟ್‌ಗಳು ಮತ್ತು ಪಕ್ಕದ ಸಾರ್ವಜನಿಕ ರಸ್ತೆಗಳು ಮಾತ್ರ ಪರಿವರ್ತನೆಗೆ ಅರ್ಹವಾಗಿವೆ. ಆಸ್ತಿ ಮಾಲೀಕರು ಭೂರೂಪಾಂತರ ಮತ್ತು ನಕ್ಷೆ ಅನುಮೋದನೆಗೆ ಶುಲ್ಕಗಳ ಜೊತೆಗೆ ಆಸ್ತಿಯ ಮಾರ್ಗದರ್ಶನ ಮೌಲ್ಯದ ಆಧಾರದ ಮೇಲೆ ಶೇಕಡಾ 5 ರಷ್ಟು ಪರಿವರ್ತನೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಮೂಲಕ ಬಿ ಖಾತಾ ಎ ಖಾತಾ ಗುಡ್‌ನ್ಯೂಸ್ ಕೊಡಲಾಗಿದೆ.

24 ಲಕ್ಷಕ್ಕೂ ಹೆಚ್ಚು ಆಸ್ತಿಗಳು: ಇನ್ನು ಬೆಂಗಳೂರಿನಲ್ಲಿ ಅಂದಾಜು 24 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಇನ್ನು ಬೆಂಗಳೂರಿನಲ್ಲಿ ಸುಮಾರು 7.5 ಲಕ್ಷ ಬಿ-ಖಾತಾ ಆಸ್ತಿಗಳಿವೆ ಎಂದು ವರದಿಯಾಗಿದೆ. ಆದರೆ ಇಲ್ಲಿಯವರೆಗೆ ಕೇವಲ 2.6 ಲಕ್ಷ ಮಾತ್ರ ಇ-ಖಾತಾಗೆ ಒಳಪಟ್ಟಿವೆ. ಅಲ್ಲದೇ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಅಂದಾಜು 30 ರಿಂದ 40 ಲಕ್ಷಕ್ಕೂ ಹೆಚ್ಚು ಬಿ – ಖಾತಾ ಆಸ್ತಿಗಳಿವೆ. ಆದರೆ ಎಲ್ಲಾ ಆಸ್ತಿಗಳಿಗೂ ಇನ್ನೂ ಇ ಖಾತಾ ಸೌಲಭ್ಯ ಸಿಕ್ಕಿಲ್ಲ.

ಬಿ ಖಾತಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್ ನೀಡಿದೆಯಾದರೂ. ಇ ಖಾತಾ ಇಲ್ಲದೆ ಬಿ ಖಾತಾ ಪಡೆದುಕೊಳ್ಳುವುದು ತೀರ ಕಷ್ಟವಾಗಲಿದೆ. ಅಲ್ಲದೇ ನೂರು ದಿನಗಳ ಒಳಗಾಗಿ ಲಕ್ಷಾಂತರ ರೂಪಾಯಿ ಹೊಂದಾಣಿಕೆ ಮಾಡುವುದು ಬಿ ಖಾತಾ ಆಸ್ತಿದಾರರಿಗೆ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *