ChatGPT Image Oct 3, 2026, 08_41_04 PM-modified
GREATER BENGALURU NEWS 9
E khata

Greater Bengaluru News9 : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಈಗ ಅತ್ಯಂತ ಚರ್ಚೆಯಲ್ಲಿ ಇರುವ ವಿಷಯ ಅಂದ್ರೆ ಖಾತಾ ಮಾಡಿಸಿಕೊಳ್ಳಲು ಸರ್ಕಾರ ನೀಡಿರುವ ಅವಕಾಶದ ಬಗ್ಗೆ. ಈ ಸಂದರ್ಭದಲ್ಲಿ ರೆವೆನ್ಯೂ ಸೈಟ್‌ಗೆ E-ಖಾತಾ ಮಾಡಿಸೋದು ಹೇಗೆ? ಅನ್ನೋ ಪ್ರಶ್ನೆ ಸಾಮಾನ್ಯ ಜನರದ್ದು. ಹೀಗಾಗಿ ಈ ಲೇಖನದಲ್ಲಿ ಅದರ ಸವಿರವಾದ ವಿವರಣೆಯನ್ನು ಸ್ಟೆಪ್‌ ಬೈ ಸ್ಟೆಪ್‌ ವಿವರಿಸಲಾಗಿದೆ.

ರೆವೆನ್ಯೂ ಸೈಟ್ ಅಂದ್ರೇನು?
ರೆವೆನ್ಯೂ ಸೈಟ್ ಅಂದರೆ – ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನಲ್ಲಿ ಸೈಟ್‌ ಮಾಡಿ ಹಂಚಿಕೆ ಮಾಡಲ್ಪಟ್ಟ, ಸರ್ಕಾರಿ ದಾಖಲೆಗಳಲ್ಲಿ ‘ಅಗ್ರಿಕಲ್ಚರಲ್ ಲ್ಯಾಂಡ್‌’ ಎಂದೇ ಇರುವ ಜಾಗ. ಸಾಧಾರಣವಾಗಿ ಈ ಸೈಟ್‌ಗಳು ಡಿಸಿ ಕನ್ವರ್ಷನ್‌ ಆಗಿರೋದಿಲ್ಲ. ಅಂದರೆ ಅಧಿಕೃತವಾಗಿ ನಾನ್‌-ಅಗ್ರಿಕಲ್ಚರಲ್‌ ಲ್ಯಾಂಡ್‌ ಆಗಿಲ್ಲ ಅಂತಾ. ಆದ್ದರಿಂದ ಬಿಬಿಎಂಪಿ / ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಇಂತಹ ಜಾಗಗಳಿಗೆ ನೇರವಾಗಿ ಖಾತೆ (ಇ-ಖಾತಾ) ಕೊಡೋದಿಲ್ಲ. ಆದರೆ ಕೆಲವು ಪ್ರಕರಣಗಳಲ್ಲಿ ಅದು ಸಾಧ್ಯ, ಅದು ಹೇಗೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಈ ಇ-ಖಾತಾ ಅಂದ್ರೆ ಏನು?
ಇ-ಖಾತಾ ಅಂದ್ರೆ ಪ್ರಾಪರ್ಟಿ ಟ್ಯಾಕ್ಸ್‌ ಮತ್ತು ಮಾಲೀಕತ್ವ ವಿವರವನ್ನು ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆ ಡಿಜಿಟಲ್ ರೀತಿಯಲ್ಲಿ ನೋಂದಣಿ ಮಾಡುವ ವ್ಯವಸ್ಥೆ. ಇದರಿಂದ ನಿಮ್ಮ ಪ್ರಾಪರ್ಟಿ ಅಧಿಕೃತವಾಗಿ ಗುರುತಿಸಲಾಗುತ್ತದೆ. ಹಳೆಯ ಖಾತೆ ಪತ್ರಗಳು ಈಗ ಎಲೆಕ್ಟ್ರಾನಿಕ್‌ ಅಂದ್ರೆ ಇ-ಖಾತಾ ಆಗಲಿದೆ. ನೀವು ಪ್ರಾಪರ್ಟಿ ಮಾರಾಟ, ಲೋನ್‌ ಅಥವಾ ಬಿಲ್ಡಿಂಗ್‌ ಪ್ಲಾನ್‌ ಅನುಮತಿ ಮಾಡಿಸಬೇಕಾದರೆ ಇ-ಖಾತಾ ಅತ್ಯವಶ್ಯಕ.

ರೆವೆನ್ಯೂ ಸೈಟ್‌ಗೆ ಇ-ಖಾತಾ ಸಾಧ್ಯವೇ?
ಇದು ಆಯಾ ಪ್ರಾಪರ್ಟಿ ಇರುವ ಸ್ಥಳದ ಮೇಲೆ ನಿರ್ಧಾರವಾಗುತ್ತದೆ. ಆಸ್ತಿಯು ಬಿಬಿಎಂಪಿ ಮತ್ತು ಬಿಡಿಎ ವ್ಯಾಪ್ತಿಯಲ್ಲಿ ಬರುವ ಪ್ರದೇಶ ಆಗಿರಬೇಕು. ಸೈಟ್ ಡಿಸಿ ಕನ್ವರ್ಷನ್‌ ಆಗಿಲ್ಲ ಅಂದ್ರೆ ನೇರವಾಗಿ ಇ-ಖಾತಾ ಸಿಗೋದಿಲ್ಲ. ಆದರೆ ಲೇಯೌಟ್‌ಗೆ ಬಿಡಿಎ/ಬಿಎಂಆರ್‌ಡಿಎ ಅಪ್ರೂವಲ್‌ ಇದ್ದರೆ ಅಥವಾ ಕನ್ವರ್ಷನ್‌ ಪೆಂಡಿಂಗ್‌ ಪ್ರೂಫ್‌ ಇದ್ದರೆ ಅರ್ಜಿ ಸಲ್ಲಿಸಬಹುದು. ಮುಖ್ಯವಾಗಿ ರೆವೆನ್ಯೂ ಸೈಟ್‌ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರಬೇಕು. ಆಗ ಸೈಟ್‌ಗೆ ಪಂಚಾಯ್ತಿ ಖಾತಾ ಲಭ್ಯವಾಗುತ್ತದೆ. ಇದು ಇ-ಖಾತಾ ಅಲ್ಲ, ಆದರೆ ಮಾನ್ಯತೆಗೆ ಬೇಕಾದ ಸ್ಥಳೀಯ ದಾಖಲೆ ಆಗಿದೆ. ಸಲಹೆ ಏನಂದ್ರೆ ರೆವೆನ್ಯೂ ಸೈಟ್‌ಗೆ ಇ-ಖಾತಾ ಮಾಡಿಸೋ ಮೊದಲು ಡಿಸಿ ಕನ್ವರ್ಷನ್‌ ಆಗಬೇಕು.

ಇ-ಖಾತಾಗೆ ಬೇಕಾಗುವ ಪ್ರಮುಖ ದಾಖಲೆಗಳು

  • ಸೇಲ್‌ ಡೀಡ್‌ (ರಿಜಿಸ್ಟ್ರೇಷನ್‌ ಕಾಪಿ)
  • ಇತ್ತೀಚಿನ ತೆರಿಗೆ ಪಾವತಿ ರಸೀತಿ
  • ಎನ್ಕಂಬ್ರನ್ಸ್‌ ಸರ್ಟಿಫಿಕೇಟ್‌ (EC)
  • ಡಿಸಿ ಕನ್ವರ್ಷನ್‌ ಆರ್ಡರ್‌ (ಲಭ್ಯವಿದ್ದರೆ)
  • ಬಿಡಿಎ, ಬಿಎಂಆರ್‌ಡಿಎ, ಪಂಚಾಯ್ತಿಯಿಂದ ಪಡೆದ ಲೇಯೌಟ್‌ ಮಾನ್ಯತೆ ಪತ್ರ.
  • ಮಾಲೀಕರ ಐಡಿ ಪ್ರೂಫ್‌ (ಆಧಾರ್‌ ಅಥವಾ ಪ್ಯಾನ್)
  • ಪ್ರಾಪರ್ಟಿ ಸ್ಕೆಟ್‌/ಬಿಲ್ಡಿಂಗ್ ಪ್ಲಾನ್ ಅಥವಾ ಲೇಯೌಟ್‌ ಪ್ಲಾನ್‌.

ಇ-ಖಾತಾ ಪಡೆಯಲು ಆನ್‌ಲೈನ್‌ ಅಪ್ಲೇ ಮಾಡುವ ವಿಧಾನ

ಸ್ಟೆಪ್‌ 1: ಬಿಬಿಎಂಪಿಯ ಈ ವೆಬ್‌ಸೈಟ್‌ಗೆ ಭೇಟಿ ನೀಡಿ https://bbmpeforms.karnataka.gov.in/

ಸ್ಟೆಪ್‌ 2: ಖಾತಾ ರಿಜಿಸ್ಟ್ರೇಷನ್ ಮತ್ತು ಟ್ರಾನ್ಸ್‌ಫರ್‌ ಆಯ್ಕೆಮಾಡಿ

ಸ್ಟೆಪ್‌ 3: ಅಪ್ಲಿಕೇಷನ್‌ ವಿವರ ಮತ್ತು ಪ್ರಾಪರ್ಟಿ ವಿವರ ತುಂಬಿ

ಸ್ಟೆಪ್‌ 4: ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್‌ ಮಾಡಿ, ಅದು ಪಿಡಿಎಫ್‌ ಫಾರ್ಮಾಟ್‌ನಲ್ಲಿರಲಿ.

ಸ್ಟೆಪ್‌ 5: ಅಪ್ಲೋಡ್‌ ಮಾಡಿದ ಬಳಿಕ ಸಬ್ಮಿಟ್‌ ಮಾಡಿ – ಅಪ್ಲಿಕೇಷನ್‌ ನಂಬರ್‌ ನೋಟ್ ಮಾಡಿ

ಸ್ಟೆಪ್‌ 6: ನಂತರ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ಮಾಡ್ತಾರೆ

ಸ್ಟೆಪ್‌ 7: ಪೇಮೆಂಟ್‌ ಇನ್‌ವಾಯ್ಸ್‌ ಜನರೇಟ್‌ ಆಗುತ್ತದೆ – ಪಾವತಿ ಮಾಡಿ ಸ್ಟೆಪ್‌ 8: ಇ-ಖಾತಾ ಸರ್ಟಿಫಿಕೇಟ್‌ ಡೌನ್ಲೋಡ್ ಮಾಡಬಹುದು

ಇಲ್ಲಿ ಮುಖ್ಯ ಸಂಗತಿ ಎಂದರೆ: ರೆವೆನ್ಯೂ ಸೈಟ್‌ ಆಗಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ಪ್ರಾಪರ್ಟಿ ದಾಖಲೆಗಳನ್ನು ಸಂಪೂರ್ಣ ಪರಿಶೀಲನೆ ಮಾಡ್ತಾರೆ.

ಖಾತಾ ಮಾಡಿಸುವಾಗ ಆಗುವ ಸಾಮಾನ್ಯ ತಪ್ಪುಗಳು

ಡಿಸಿ ಕನ್ವರ್ಷನ್‌ ಇಲ್ಲದೇ ಅಪ್ಲೇ ಮಾಡಿದ್ರೆ ರಿಜೆಕ್ಟ್‌ ಆಗುತ್ತದೆ. ಲೇಯೌಟ್‌ ಅಪ್ರೂವಲ್‌ ಇಲ್ಲದಿದ್ದರೆ ಡಿಲೇ ಆಗಬಹುದು. ಫೇಕ್‌ ಏಜೆಂಟ್ಸ್‌ ಮೂಲಕ ಅಪ್ಲೆ ಮಾಡಿದರೆ ಹಣ ಮತ್ತು ಸಮಯ ವ್ಯರ್ಥ. ರೆವೆನ್ಯೂ ಸೈಟ್‌ನಿಂದ ಇ-ಖಾತಾ ಮಾಡಿಸೋ ವಿಧಾನ ಸ್ವಲ್ಪ ಕಠಿಣ. ಇದಕ್ಕಾಗಿ ವಕೀಲರು ಅಥವಾ ಕನ್ಸಲ್ಟಂಟ್‌ ಮೂಲಕ ವ್ಯವಹಾರ ನಡೆಸಿ.

ಒಟ್ಟಾರೆ, ರೆವೆನ್ಯೂ ಸೈಟ್‌ ಅನ್ನು ಇ-ಖಾತಾ ಮಾಡಿಸೋದು ಸಿಂಪಲ್‌ ಆಗಿ ಕಾಣಿಸಿದ್ರೂ, ನಿಯಮ ಪ್ರಕಾರ ದಾಖಲೆ ಪತ್ರಗಳು ತುಂಬಾ ಮುಖ್ಯ. ನಿಮ್ಮ ಪ್ರಾಪರ್ಟಿ ಸೇಫ್‌ ಆಗಿ ಇರಬೇಕೆಂದರೆ, ಡಿಸಿ ಕನ್ವರ್ಷನ್, ಟ್ಯಾಕ್ಸ್‌ ಪೇಮೆಂಟ್ ಮತ್ತು ಸ್ಪಷ್ಟ ದಾಖಲೆಗಳು ಇರಬೇಕು.

Leave a Reply

Your email address will not be published. Required fields are marked *