BBMP
Loading ...

Terrorist

Greater Bengaluru News9 : ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್ ಉಗ್ರರ ಕೈಯಲ್ಲಿ ಆಂಡ್ರಾಯ್ಡ್ ಮೊಬೈಲ್​ಗಳು ಇರುವುದು ಹಾಗೂ ನಟೋರಿಯಸ್ ಕ್ರಿಮಿನಲ್ ಉಮೇಶ್ ರೆಡ್ಡಿಯಂತಹ ಕೈದಿಗಳ ಬಳಿಯೂ ಮೊಬೈಲ್ ಇರುವ ವಿಡಿಯೋ ಇದೀಗ ಬಹಿರಂಗವಾಗಿದೆ. ಇದೀಗ ಭಯೋತ್ಪಾದಕರಿಗೂ ಪರಪ್ಪನ ಅಗ್ರಹಾರ ಜೈಲು ಸ್ವರ್ಗವಾಯ್ತಾ ಅನ್ನೋ ಅನುಮಾನ ಮೂಡಿದೆ.

ಹೌದು ಬಾಂಗ್ಲಾ ಮೂಲದ ಟೆರರಿಸ್ಟ್‌ಗಳ ಕೈಯಲ್ಲೂ ಮೊಬೈಲ್‌ ಇರುವ ವಿಡಿಯೋ ಸಿಕ್ಕಿದೆ. ಲಷ್ಕರ್ ತೋಯ್ಬಾ ಭಯೋತ್ಪಾದಕರ ಕೈಯಲ್ಲಿ ಆಂಡ್ರಾಯ್ಡ್ ಮೊಬೈಲ್ ಇದೆ. ಟೆರರಿಸ್ಟ್‌ಗಳ ಕೈಯಲ್ಲಿ ಮೊಬೈಲ್‌ ಇದ್ದರೆ ದೇಶದ ಭದ್ರೆತೆಯ ಗತಿ ಏನು ಅನ್ನೋ ಪ್ರಶ್ನೆ ಎದುರಾಗಿದೆ.

ಜೈಲಿನಲ್ಲಿ ಇದ್ದುಕೊಂಡು ಭಯೋತ್ಪಾದಕ ಚಟುವಟಿಕೆ ಮಾಡೋ ಸಾಧ್ಯತೆ ಇದೆ. ವಿಡಿಯೋ ಕಾಲ್, ಪೋನ್ ಮಾಡಿ ಮಾತಾನಾಡುತ್ತಿರುವ ಟೆರರಿಸ್ಟ್‌ಗಳು ಮಾತನಾಡುತ್ತಿದ್ದಾರೆ. ಭಯೋತ್ಪಾದಕ ಚಟುವಟಿಕೆ ನಡೆಸೋ ಕ್ರಿಮಿಗಳಿಗೆ ಒಂಚೂರು ಕಡಿವಾಣ ಇಲ್ಲ. ದೇಶದ್ರೋಹಿಗಳಿಗೂ ಪರಪ್ಪನ ಅಗ್ರಹಾರ ಜೈಲು ಫೈವ್ ಸ್ಟಾರ್ ಹೋಟೆಲ್ ರೀತಿ ಆಗಿದೆ.

ಬೆಂಗಳೂರಿನ ತಿಲಕ್‌ನಗರದವನಾದ ಜುಹಾದ್‌ ಹಮೀದ್‌ ಶಕೀಲ್‌ ಮೂಲಭೂತವಾದಿ ಮನಸ್ಥಿತಿಯುಳ್ಳ ಮುಸ್ಲಿಂ ಯುವಕರನ್ನ ಐಸಿಸ್‌ಗೆ ನೇಮಕ ಮಾಡ್ತಿದ್ದ. ʻಇಕ್ರಾ ಸರ್ಕಾಲ್‌ʼ ಹೆಸರಿನಲ್ಲಿ ಆನ್‌ಲೈನ್‌ ಗ್ರೂಪ್‌ ರಚಿಸಿ ಉಗ್ರರ ಸಂಘಟನೆಗೆ ನೇಮಕಾತಿ ನಡೆಸುತ್ತಿದ್ದ. ಅದರಂತೆ ಬೆಂಗಳೂರಿನ ನಾಲ್ವರನ್ನೂ ಸಿರಿಯಾಗೆ ಕರೆದೊಯ್ದಿದ್ದ. ಆದ್ರೆ ಟರ್ಕಿಯ ಇಸ್ತಾಂಬುಲ್ ರೆಫ್ಯೂಜಿ ಕ್ಯಾಂಪ್‌ನಲ್ಲೇ ಇಬ್ಬರು ಮೃತಪಟ್ಟಿದ್ದರು.

ಇನ್ನು ಜೈಲಲ್ಲಿರುವ ಉಮೇಶ್‌ ರೆಡ್ಡಿ ಕೈಯಲ್ಲಿ ಮೊಬೈಲ್‌ ಹಾಗೂ ಆತ ಇರುವ ರೂಮ್‌ನಲ್ಲಿ ಟಿವಿ ಇರೋದು ವಿಡಿಯೋದಲ್ಲಿ ದಾಖಲಾಗಿದೆ. ಆತನ ಬಳಿ ಎರಡು ಆಂಡ್ರಾಯ್ಡ್‌ ಫೋನ್‌ಗಳು ಪತ್ತೆಯಾಗಿದೆ. ಕೀಪ್ಯಾಡ್‌ ಮೊಬೈಲ್‌ ಇರಿಸಿಕೊಂಡು ಆತ ಮಾತನಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಅದರೊಂದಿಗೆ ಆತನೇ ತನಗೆ ಬೇಕಾದ ಅಡುಗೆ ಮಾಡಿಕೊಳ್ಳುತ್ತಿದ್ದಾನೆ. ಜೈಲಾಧಿಕಾರಿಗಳಿಂದ ಉಮೇಶ್ ರೆಡ್ಡಿಗೆ ರಾಜಾತಿಥ್ಯ ನೀಡಲಾಗಿದೆ.ರೇಪಿಸ್ಟ್‌ ಉಮೇಶ್‌ ರೆಡ್ಡಿಗೆ ಜೈಲಿನಲ್ಲಿ ಹೈಫೈ ಟ್ರೀಟ್‌ಮೆಂಟ್‌ ಸಿಗುತ್ತಿದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *