BBMP
Loading ...

E khata

ಬೆಂಗಳೂರು : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬಿ-ಖಾತಾ ನಿವೇಶನಗಳಿಗೆ ಎ-ಖಾತಾ ನೀಡುವ ಕುರಿತು ಜು.17ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 2024ರ ಸೆ. 30ಕ್ಕಿಂತ ಮುಂಚಿತವಾಗಿ ಬಿ-ಖಾತಾ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಎ-ಖಾತಾ ಅಥವಾ ಬಿ-ಖಾತಾವನ್ನೇ ಸಕ್ರಮ ಖಾತಾ ಎಂದು ಪರಿಗಣಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

2024ರ ಸೆ.30 ರವರೆಗೆ ಬಿಬಿಎಂಪಿ ನೀಡಿರುವ ಬಿ-ಖಾತಾಗಳಿಗೆ ಎ-ಖಾತಾ ಅಥವಾ ಅಧಿಕೃತ ಖಾತಾ ನೀಡುವ ಕುರಿತು ತಿಳಿಸಲಾಗಿದೆ. ಹಲವು ವರ್ಷಗಳಿಂದ ಕಾನೂನು ಮಾನ್ಯತೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಬಿ-ಖಾತಾದಾರರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಿ ಖಾತಾಗಳನ್ನು ಎ-ಖಾತಾ ಎಂದು ಪರಿಗಣಿಸಲು ನಿರ್ಧರಿಸಿದೆ.

ಈ ಕುರಿತು ಕಳೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಬಿ-ಖಾತಾಗಳಿಗೆ ಎ-ಖಾತಾ ಅಥವಾ ಸರಿಯಾದ ಖಾತಾ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಇದೀಗ 2024ರ ಸೆ. 30ಕ್ಕಿಂತ ಮುಂಚಿತವಾಗಿ ಬಿ-ಖಾತಾ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಎ-ಖಾತಾ ಅಥವಾ ಬಿ-ಖಾತಾವನ್ನೇ ಸಕ್ರಮ ಖಾತಾ ಎಂದು ಪರಿಗಣಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ ಆದೇಶದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2009ಕ್ಕಿಂತ ಹಿಂದೆ ನೀಡಿರುವ ಎಲ್ಲ ಖಾತಾಗಳೂ ಎ-ಖಾತಾ ಅಥವಾ ಸಕ್ರಮ ಖಾತಾ ಎಂದು ತೀರ್ಮಾ ನಿಸಲಾಗಿದೆ. ಅದರೊಂದಿಗೆ ಕೃಷಿ ಜಮೀನನ್ನು ಕೃಷಿಯೆ ತರ ಉದ್ದೇಶಗಳಿಗೆ ಬದಲಾವಣೆಗೊಂಡ ಯಾವುದೇ ವಿಸ್ತೀರ್ಣದ ಭೂಮಿಗೆ ಮತ್ತು ಅಭಿವೃದ್ಧಿ ಶುಲ್ಕವನ್ನು ಪಾವತಿಸಿದ ಜಾಗದ ಬಿ-ಖಾತಾ ಆಸ್ತಗಳಿಗೆ ಎ-ಖಾತಾ ನೀಡಲಾಗುತ್ತದೆ.

ಕಟ್ಟಡ ನಿರ್ಮಾಣ ನಕ್ಷೆ, ಒಸಿ, ಸಿಸಿ ಸೇರಿದಂತೆ ವಿವಿಧ ಶುಲ್ಕ ವಿಧಿಸಲು ಬಿಬಿಎಂಪಿಗೆ ಅವಕಾಶ ಕೊಟ್ಟ ಹೈಕೋರ್ಟ್​

Leave a Reply

Your email address will not be published. Required fields are marked *