BBMP
Loading ...

BESCOM

ಬೆಂಗಳೂರು: ಬೆಸ್ಕಾಂ ನಿರ್ಲಕ್ಷದಿಂದಾಗಿ ಪವರ್​ ಮ್ಯಾನ್​ ಒಬ್ಬರು ಸುಟ್ಟ ಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

45 ವರ್ಷದ ಪವರ್​ಮ್ಯಾನ್​ ಪ್ರಕಾಶ್​ ಎಂಬುವರು ಬೆಸ್ಕಾಂನ ಸುಂಕದಕಟ್ಟೆಯ ವಿಭಾಗದಲ್ಲಿ ಜಿಒಎಸ್ ತೆರೆಯಲು ಪ್ರಯತ್ನಿಸುವಾಗ ಆರ್ಕಿಂಗ್ ಸಂಭವಿಸಿದ ಪರಿಣಾಮ ವಿದ್ಯುತ್​ ಶಾಕ್​ನಿಂದ ಮೈ ತುಂಬಾ ಗಂಭೀರ ಸುಟ್ಟ ಗಾಯಗಳಾಗಿವೆ. ಪರಿಸ್ಥಿತಿ ಗಂಭೀರವಾಗಿದ್ದು, ಪ್ರಕಾಶ್​ ಅವರನ್ನು ತಕ್ಷಣ ಕೆಂಗೇರಿಯ ಬಿಜಿಎಸ್​ ಆಸ್ಪತ್ರೆಗೆ ದಾಖಲಿಸಲಾಗಿಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಟಿ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈ ಘಟನೆ ಸುಂಕದಕಟ್ಟೆ ವಿಭಾಗದ ನಾಡಕೇರಪ್ಪ ಇಂಡ್ಸ್ ಎಸ್ಟೇಟ್, ಬ್ಯಾಡರಹಳ್ಳಿ MUSSನ ಡ್ರಮ್ ಕಾರ್ಖಾನೆಯ ಹತ್ತಿರ ಇರುವ ಬೈರವೇಶ್ವರ ಕೈಗಾರಿಕಾ ಎಸ್ಟೇಟ್​ನಲ್ಲಿ ನಡೆದಿದೆ. ದೂರಿನ ಹಿನ್ನೆಲೆಯಲ್ಲಿ ಟಿಸಿ ನಂಬರ್​ 848 ಅನ್ನು ದುರಸ್ತಿ ಮಾಡಲು ಬಂದಿದ್ದರು. ಈ ವೇಳೆ ವಿದ್ಯುತ್​ ಶಾಕ್​ನಿಂದ ಅವಘಡ ಸಂಭವಿಸಿದೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಈ ಒಂದು ದುರ್ಘಟನೆ ಸಂಭವಿಸಿದೆ. ದುರಸ್ಥಿ ಮಾಡುವಾಗ ಅನುಸರಿಸಬೇಕಾದ ಮುನ್ನೆಚ್ಛರಿಕಾ ಕ್ರಮಗಳನ್ನು ಅನುಸರಿಸದೇ ಇದ್ದುದ್ದರಿಂದ 11 ಕೆವಿ ಸಾಮರ್ಥ್ಯದ ಟಾನ್ಸ್​ಫಾರ್ಮರ್​ನಲ್ಲಿ ಸಂಭವಿಸಿದ ವಿದ್ಯುತ್​ ಶಾಕ್​ನಿಂದ ಮೈತುಂಬಾ ಸುಟ್ಟು ಹೋಗಿದ್ದು, ನೋವಿನಿಂದ ಪ್ರಕಾಶ್​ ನರಳಾಡುತ್ತಿದ್ದಾರೆ. ಈ ಸುದ್ದಿ ಕೇಳಿ ಪ್ರಕಾಶ್​ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಸವ ಬಲಿ : ಗ್ರೌಂಡಿಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಾಗರೀಕರು

Leave a Reply

Your email address will not be published. Required fields are marked *