ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕಳೆದು 2 ವಾರಗಳಿಂದ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾರಂಭ ಮಹಾಕುಂಭಮೇಳ ನಡೆಯುತ್ತಿದೆ. ಇನ್ನು ಪ್ರಯಾಗ್ರಾಜ್ನಲ್ಲಿ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆ ಕಾಲ್ತುಳಿತ ಉಂಟಾಗಿದೆ. ಈ ನಡುವೆ ಕರ್ನಾಟಕದಿಂದ ಕುಂಭ ಮೇಳಕ್ಕೆ ತೆರಳಿದ್ದ ಜನರು ಕೂಡ ಈ ಕಾಲ್ತುಳಿತದಲ್ಲಿ ಸಿಲುಕಿರುವುದಾಗಿ ಅಲ್ಲಿಯೇ ಇರುವ ಮಹಿಳೆ ಆತಂಕ ವ್ಯಕ್ತಪಡಿಸಿದ್ದರು. ಆದ್ರೆ ಇದೀಗ ಬೆಳಗಾವಿ ತಾಯಿ ಮತ್ತು ಮಗಳು ಈ ಕಾಲ್ತುಳಿತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ತಾಯಿ-ಮಗಳು ಮಿಸ್ಸಿಂಗ್ ಎಂದು ಬೆಳಿಗ್ಗೆಯಿಂದಲೇ ಸುದ್ದಿಯಾಗಿತ್ತು. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಮತ್ತು ಮೇಘಾ ಹತ್ತರವಾಠ್ ನಾಪತ್ತೆಯಾಗಿದ್ದರು ಎನ್ನಲಾಗಿತ್ತು. ಆದ್ರೆ ಇದೀಗ ಈ ಇಬ್ಬರೂ ಮಹಿಳೆಯರು ಕಾಲ್ತುಳಿತದಿಂದ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಹೌದು, ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಪವಿತ್ರ ಸ್ನಾನದಲ್ಲಿ ಪಾಲ್ಕೊಳ್ಳಲೆಂದು ಕರ್ನಾಟದ ಬೆಳಗಾವಿಯಿಂದ ಸುಮಾರು 60 ಜನರ ತಂಡ ಎರಡು ಬಸ್ಗಳಲ್ಲಿ ತೆರಳಿದ್ದರು. ಇದರಲ್ಲಿ ನಮ್ಮ ಜೊತೆಗೆ 9 ಜನರು ಇದ್ದರು. ಅದರಲ್ಲಿ ನಾಲ್ಕೈದು ಜನ ಕಾಣಿಸುತ್ತಿಲ್ಲ ಎಂದು ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದರು. ಈ ಮಧ್ಯೆ ಬೆಳಗಾವಿಯ ತಾಯಿ ಮತ್ತು ಮಗಳು ನಾಪತ್ತೆಯಾಗಿದ್ದಾರೆ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಸುದ್ದಿಗಳೂ ವೈರಲ್ ಆಗಿತ್ತು. ಆದ್ರೆ ಇದೀಗ ನಾಪತ್ತೆಯಾಗಿದ್ದ ತಾಯಿ ಜ್ಯೋತಿ ಮತ್ತು ಮಗಳು ಮೇಘ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಾಲ್ತುಳಿತದ ಸಮಯದಲ್ಲಿ ಹಾಜರಿದ್ದ ಲೋಕಲ್ -18 ವರದಿಗಾರ ರಜನೀಶ್ ಯಾದವ್, ಈ ಬಗ್ಗೆ ವಿವರ ನೀಡುತ್ತಾ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸಂಗಮ್ ಸುತ್ತಮುತ್ತ ಜನಸಂದಣಿ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಲು 45 ಘಾಟ್ಗಳನ್ನು ನಿರ್ಮಿಸಲಾಗಿದ್ದರೂ, ಜನರು ಮುಖ್ಯ ಸಂಗಮದಲ್ಲಿ ಮಾತ್ರ ಸ್ನಾನ ಮಾಡಬೇಕೆಂದು ಹಠ ಮಾಡುತ್ತಿದ್ದರು.
ಇದರಿಂದಾಗಿ ಜನಸಮೂಹ ಒಬ್ಬರನ್ನೊಬ್ಬರು ತಳ್ಳುತ್ತಾ ಮುಂದಕ್ಕೆ ಚಲಿಸಲು ಪ್ರಾರಂಭಿಸಿತು. ಇದರಿಂದಾಗಿ ಜನಸಂದಣಿಯನ್ನು ನಿಯಂತ್ರಿಸಲು ಹಾಕಲಾದ ಬ್ಯಾರಿಕೇಡ್ಗಳು ಮುರಿಯಲು ಪ್ರಾರಂಭಿಸಿದವು. ಶೀಘ್ರದಲ್ಲೇ ಕೆಲವು ಮಹಿಳೆಯರಿಗೆ ಉಸಿರುಗಟ್ಟಿದೆ ಮತ್ತು ಕೆಳಗೆ ಬೀಳಲು ಪ್ರಾರಂಭಿಸಿದರು. ಇದರಿಂದಾಗಿ ಕಾಲ್ತುಳಿತ ಮತ್ತಷ್ಟು ಹೆಚ್ಚಾಯಿತು ಮತ್ತು ಜನರು ಕೂಗಾಡಲು ಮತ್ತು ಕಿರುಚಲು ಪ್ರಾರಂಭಿಸಿದರು. ಆ ದೃಶ್ಯ ತುಂಬಾ ಭಯಾನಕವಾಗಿತ್ತು ಎಂದು ತಿಳಿಸಿದ್ದಾರೆ.
ವಿಜಯೇಂದ್ರ ಅಹಂಕಾರ, ದರ್ಪ ಸಹಿಸಿ ಸಾಕಾಗಿದೆ: ಬಿಎಸ್ವೈ ಪುತ್ರನ ವಿರುದ್ಧ ಸಿಡಿದೆದ್ದ ಸಂಸದ ಸುಧಾಕರ್


