BBMP
Loading ...

BESCOM

ಬೆಂಗಳೂರು: ಬೆಂಗಳೂರಿನ ಎಚ್​ಎಸ್​ಆರ್​ ವಿಭಾಗದ ಎಸ್​8 ಉಪ ವಿಭಾಗ ಹೊಂಗಸಂದ್ರ ಶಾಖೆಯ ಎಇಸಿಎಸ್ ಲೇಔಟ್​ನ ಬಿ ಬ್ಲಾಕ್​ನಲ್ಲಿ ಬೆಸ್ಕಾಂಗೆ ಸಂಬಂಧಿಸಿದ ವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಹೊಂಗಸಂದ್ರ ಶಾಖೆಯ ಶ್ರೀನಿವಾಸ್​ ಹೆಸರಿನ ಪವರ್​ಮ್ಯಾನ್, ತನ್ನದೇಯಾದ ಗೋಡೌನ್​ ಅನ್ನು ಮಾಡಿದ್ದು, ಸುಮಾರು 8 ರಿಂದ 10 ವರ್ಷಗಳಿಂದ ಈ ಗೋಡೌನ್​ ನಿರ್ವಹಣೆ ಮಾಡುತ್ತಿದ್ದಾರೆ. ಗೋಡೌನ್​ ಅನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಬೆಸ್ಕಾಂಗೆ ಸಂಬಂಧಿಸಿದ ವಸ್ತುಗಳನ್ನು ಗೋಡೌನ್​ನಲ್ಲಿ ಇಟ್ಟುಕೊಂಡು ಸ್ವಯಂ ಕಾರ್ಯ ಅಡಿ ಮಾಡಬೇಕಾದ ಕೆಲಸವನ್ನು ಕಂಪನಿಯ ವಸ್ತುಗಳನ್ನು ಬಳಸಿಕೊಂಡು ಪವರ್​ ಮ್ಯಾನ್​ ಶ್ರೀನಿವಾಸ್​ ಮಾಡಿಸುತ್ತಿರುವುದು ಕಂಡುಬಂದಿದೆ.

ಅಕ್ರಮ ಗೋಡೌನ್​ ಮಾಡಿಕೊಂಡು, ತಿಂಗಳ ಸಂಬಳ ತೆಗೆದುಕೊಂಡು ಇದರ ಜೊತೆಗೆ ಗುತ್ತಿಗೆದಾರರ ಕೆಲಸಗಳನ್ನು ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಬೆಸ್ಕಾಂ ಅಧಿಕಾರಿಗಳಿಗೆ ಗೊತ್ತಿದೆಯೋ? ಇಲ್ಲವೋ? ಆದರೆ, ಈ ರೀತಿ ಅಕ್ರಮವಾಗಿ ಗೋಡೌನ್​ ಮಾಡುವುದು ಅಪರಾಧ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.

ವೃಷಭಾವತಿನಗರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಸದಸ್ಯರುಗಳು ಅವಿರೋಧ ಆಯ್ಕೆ

Leave a Reply

Your email address will not be published. Required fields are marked *