ಬೆಂಗಳೂರು: ಬೆಂಗಳೂರಿನ ಎಚ್ಎಸ್ಆರ್ ವಿಭಾಗದ ಎಸ್8 ಉಪ ವಿಭಾಗ ಹೊಂಗಸಂದ್ರ ಶಾಖೆಯ ಎಇಸಿಎಸ್ ಲೇಔಟ್ನ ಬಿ ಬ್ಲಾಕ್ನಲ್ಲಿ ಬೆಸ್ಕಾಂಗೆ ಸಂಬಂಧಿಸಿದ ವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಹೊಂಗಸಂದ್ರ ಶಾಖೆಯ ಶ್ರೀನಿವಾಸ್ ಹೆಸರಿನ ಪವರ್ಮ್ಯಾನ್, ತನ್ನದೇಯಾದ ಗೋಡೌನ್ ಅನ್ನು ಮಾಡಿದ್ದು, ಸುಮಾರು 8 ರಿಂದ 10 ವರ್ಷಗಳಿಂದ ಈ ಗೋಡೌನ್ ನಿರ್ವಹಣೆ ಮಾಡುತ್ತಿದ್ದಾರೆ. ಗೋಡೌನ್ ಅನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಬೆಸ್ಕಾಂಗೆ ಸಂಬಂಧಿಸಿದ ವಸ್ತುಗಳನ್ನು ಗೋಡೌನ್ನಲ್ಲಿ ಇಟ್ಟುಕೊಂಡು ಸ್ವಯಂ ಕಾರ್ಯ ಅಡಿ ಮಾಡಬೇಕಾದ ಕೆಲಸವನ್ನು ಕಂಪನಿಯ ವಸ್ತುಗಳನ್ನು ಬಳಸಿಕೊಂಡು ಪವರ್ ಮ್ಯಾನ್ ಶ್ರೀನಿವಾಸ್ ಮಾಡಿಸುತ್ತಿರುವುದು ಕಂಡುಬಂದಿದೆ.
ಅಕ್ರಮ ಗೋಡೌನ್ ಮಾಡಿಕೊಂಡು, ತಿಂಗಳ ಸಂಬಳ ತೆಗೆದುಕೊಂಡು ಇದರ ಜೊತೆಗೆ ಗುತ್ತಿಗೆದಾರರ ಕೆಲಸಗಳನ್ನು ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಬೆಸ್ಕಾಂ ಅಧಿಕಾರಿಗಳಿಗೆ ಗೊತ್ತಿದೆಯೋ? ಇಲ್ಲವೋ? ಆದರೆ, ಈ ರೀತಿ ಅಕ್ರಮವಾಗಿ ಗೋಡೌನ್ ಮಾಡುವುದು ಅಪರಾಧ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.
ವೃಷಭಾವತಿನಗರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಸದಸ್ಯರುಗಳು ಅವಿರೋಧ ಆಯ್ಕೆ


