BBMP
Loading ...

BESCOM

ಬೆಂಗಳೂರು: ರಾಜ್ಯ ರಾಜಧಾನಿಯ ನಾಗರಿಕರೇ ಗಮನಿಸಿ, ಅಕ್ಟೋಬರ್ 14ರಿಂದ 17ರವರೆಗೆ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಯಾವ ಪ್ರದೇಶಗಳಲ್ಲಿ ಎಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬ ವಿವರ ನಿಮಗೆಂದೇ ಇಲ್ಲಿದೆ. ಜಲಶ್ರೀ ವಾಟರ್ ಸಪ್ಲೈ ಸರ್ವಿಸ್, ಟ್ರೀ ಪಂಪಿಂಗ್, ಆರ್ ಎಂ ಯು ಸರ್ವೀಸ್ ಸೇರಿ ಇನ್ನಿತರ ರಿಪೇರಿ ಕಾರ್ಯಗಳು ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಅಕ್ಟೋಬರ್ 14 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು ಹೀಗಿವೆ
ಕುಣ್ಣೂರು, ಹೊಸಕೆರೆಹಳ್ಳಿ, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತ ನಗರ, ಗಿರಿನಗರ, ಸೀತಾಸರ್ಕಲ್, ವಿದ್ಯಾಪೀಠ, ಪ್ರಮೋದ್ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರೋಡ್, ಕತ್ರುಗುಪ್ಪೆ, ಅವಲಹಳ್ಳಿ, ತ್ಯಾಗರಾಜನಗರ, ಬಸವನಗುಡಿ, ಬನಶಂಕರಿ ಸುತ್ತಮುತ್ತ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಅಕ್ಟೋಬರ್ 15 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು ಹೀಗಿವೆ
ದೇವನಹಳ್ಳಿ, ವಿಜಯಪುರ, ದೊಡ್ಡನಹಳ್ಳಿ, ಶಿವನಹಳ್ಳಿ, ಕಾವೇರಿನಗರ, ಹುಳಿಮಾವು, ಅಕ್ಷಯನಗರ, ಹೊಂಗಸಂದ್ರ, ಕೋಡಿಚಿಕ್ಕನಹಳ್ಳಿ, ವಿಜಯಬ್ಯಾಂಕ್ ಲೇಔಟ್, ವಿಶ್ವಪ್ರಿಯ ಲೇಔಟ್, ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಆರ್ ಪಿಸಿ ಲೇಔಟ್, ವಿನಾಯಕ ಲೇಔಟ್, ನಾಗರಬಾವಿ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಸುತ್ತಮುತ್ತ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಅಕ್ಟೋಬರ್ 17 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು ಹೀಗಿವೆ
ವಿನಾಯಕ ಲೇಔಟ್, ಫ್ರೆಂಡ್ಸ್ ಲೇಔಟ್, ಹನುಮಾರೆಡ್ಡಿ ಲೇಔಟ್, ದೊಡ್ಡನಕುಂಡಿ ಎಕ್ಸ್ ಟೆಕ್ಷನ್, ಚಿನ್ಬಪ್ಪನಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕೃತ ಮಾಹಿತಿ ನೀಡಿದೆ.

ಟೆಂಡ‌ರ್​ ಆಹ್ವಾನದಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ: ಸರಿಪಡಿಸದಿದ್ದರೆ ಅಮರಣಾಂತ ಮುಷ್ಕರ, KSLECA ಎಚ್ಚರಿಕೆ

Leave a Reply

Your email address will not be published. Required fields are marked *