ಬೆಂಗಳೂರು: ಎಸ್ಕಾಂ ಕಂಪನಿಗಳಲ್ಲಿ ಟೆಂಡರ್ ಆಹ್ವಾನಿಸಿರುವುದನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಮಾಡಿದೆ.
ಸಂಘದ ರಾಜ್ಯಾಧ್ಯಕ್ಷ ರಮೇಶ್ ನೇತೃತ್ವದಲ್ಲಿ ಇಂದು ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಸಚಿವ ಜಾರ್ಜ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ
ಈಗಾಗಲೇ ಸ್ಥಳೀಯ ಗುತ್ತಿಗೆದಾರರಿಗೆ ತುಂಡುಗುತ್ತಿಗೆ ಕಾಮಗಾರಿಗಳನ್ನು ನೀಡುವಂತೆ ಮಾನ್ಯ ಮುಖ್ಯ ಮಂತ್ರಿಗಳಿಗೆ, ಇಂಧನ ಸಚಿವರಿಗೆ ಇಂಧನ ಕಾರ್ಯದರ್ಶಿಯವರಿಗೆ, ಹಾಗೂ ಐದು ವಿದ್ಯುತ್ ಸರಬರಾಜು ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿರುತ್ತೇವೆ ಹಾಗೂ ಕಳೆದ 2 ವರ್ಷಗಳಿಂದ ಸ್ಥಳಿಯರಿಗೆ ಕಾಮಗಾರಿಗಳನ್ನು ಪೂರ್ಣ ಗುತ್ತಿಗೆ / ಪಿ.ಟಿ.ಕೆ (Partial Turnkey), ಲೇಬರ್ ಅರ್ವಾರ್ಡ್ ಕಾಮಗಾರಿಗಳನ್ನು ನೀಡುತ್ತಾ ಬಂದಿರುತ್ತಾರೆ.

ಮಾನ್ಯ ಇಂಧನ ಸಚಿವರ ಆದೇಶ ಸಂಖ್ಯೆ: ಎನರ್ಜಿ 576 ಇಇಬ 2022 ದಿನಾಂಕ: 29.11.2022 ರಂದು ಆದೇಶವಾಗಿದ್ದು, 1 ಲಕ್ಷ ದಿಂದ 5 ಲಕ್ಷದವರೆಗೂ ಕಾಮಗಾರಿಗಳನ್ನು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ನೀಡುವಂತೆ ಆದೇಶವಿದ್ದರು. ಉಲ್ಲೇಖದನ್ವಯ ಟೆಂಡರ್ಗಳನ್ನು ಕರೆದಿರುವುದು, ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿರುತ್ತದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಛೇರಿಗಳಲ್ಲಿ ಉಲ್ಲೇಖದನ್ವಯ ಬೃಹತ್ ಮೊತ್ತದ ಟೆಂಡರ್ಗಳನ್ನು ಕರೆದಿರುತ್ತಾರೆ. ಇದರಿಂದ ನಮ್ಮ ಬೆಸ್ಕಾಂ ಹಾಗೂ ಚೆಸ್ಕಾಂ ವ್ಯಾಪ್ತಿಯ ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಕೆಲಸವಿಲ್ಲದ ಪರಿಸ್ಥಿತಿ ಉಂಟಾಗಿದೆ.
ಈಗಿನ ಜನಪ್ರಿಯ ಸರ್ಕಾರವು ಹಲವಾರು ಉಚಿತ ಘೋಷಣೆಗಳನ್ನು ನೀಡುತ್ತಿದ್ದು, ರಾಜ್ಯದ ಪ್ರಜೆಗಳ ಅಭಿವೃದ್ಧಿಗಾಗಿ ಮಾಡಿರುತ್ತಾರೆ. ಆದರೆ ರಾಜ್ಯಾಧ್ಯಂತ ಸುಮಾರು 28 ಸಾವಿರ ಗುತ್ತಿಗೆದಾರರಿದ್ದು ಇವರಿಗೆ ಕೆಲಸ ಎಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾಮಗಾರಿಯನ್ನು ನಂಬಿ 30 ಲಕ್ಷಕ್ಕು ಹೆಚ್ಚು ಜನ ಜೀವನವನ್ನು ನಡೆಸುತ್ತಿದ್ದಾರೆ ಆದರೆ ಈಗ ಕರೆದಿರುವ ಬೃಹತ್ ಟೆಂಡರ್ನಿಂದ 64 ಜನಗಳಿಗೆ ಮಾತ್ರ ಅನುಕೂಲವಾಗುತ್ತದೆ, ಉಳಿದ ವಿದ್ಯುತ್ ಗುತ್ತಿಗೆದಾರರಿಗೆ ಆರ್ಥಿಕವಾಗಿ ಜೀವನ ನಡೆಸಲು ತುಂಬಾ ಕಷ್ಟಕರವಾಗುತ್ತದೆ. ಆದ್ದರಿಂದ ಈ ವೃತ್ತಿಯನ್ನು ನಂಬಿಕೊಂಡಿರುವ ಸದಸ್ಯರಿಗೆ ಅನುಕೂಲವಾಗಲು ಈ ರಾಜ್ಯದಲ್ಲಿ ಆರ್ಥಿಕವಾಗಿ ಹಾಗೂ ಸ್ವಾಲಂಬಿತರಾಗಿ ಬದುಕಲು ಈ ಟೆಂಡರ್ನ್ನು ರದ್ದುಮಾಡಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ.

ಈಗಾಗಲೇ ಕರೆದಿರುವ ಟೆಂಡರ್ ಹಿಂಪಡೆಯದಿದ್ದಲ್ಲಿ ರಾಜ್ಯಾಧ್ಯಂತ ವಿದ್ಯುತ್ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ, ಇದಕ್ಕೆ ತಾವುಗಳು ನೇರ ಹೊಣೆಗಾರರಾಗುತ್ತೀರಿ, ರಾಜ್ಯ ವಿದ್ಯುತ್ ಗುತ್ತಿಗೆದಾರರ ಕುಟುಂಭ ಹಾಗೂ ಕಾರ್ಮಿಕ ಕುಟುಂಬದ ಅಳಿವು ಉಳಿವು ನೀವು ತೆಗೆದುಕೊಳ್ಳುವ ನಿರ್ದಾರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗೂ ಈ ಮನವಿ ತಲುಪಿದ ಒಂದು ವಾರದಲ್ಲಿ ರಾಜ್ಯಾ ಪದಾಧಿಕಾರಿಗಳನ್ನು ಕರೆದು ಇದರ ಬಗ್ಗೆ ಚರ್ಚಿಸಿ, ಗುತ್ತಿಗೆದಾರರಿಗೆ ಅನುಕೂಲ ಮಾಡಿ ಕೊಡದಿದ್ದಲ್ಲಿ, ರಾಜ್ಯಾಧ್ಯಂತ ವಿದ್ಯುತ್ ಗುತ್ತಿಗೆದಾರರು, ಕಾರ್ಮಿಕ ವರ್ಗದವರು ಎಲ್ಲಾ ಜಿಲ್ಲಾ ವೃತ್ತ ಕಛೇರಿಗಳ ಮುಂದೆ ಅಮರಣಾಂತರ ಮುಷ್ಕರವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಈ ಮೂಲಕ ರಾಜ್ಯದ ಸಮಸ್ತ ಗುತ್ತಿಗೆದಾರರ ಪರವಾಗಿ ತಮಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಸಂಘ ತಿಳಿಸಿದೆ.




