ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಪೂರ್ಣಗೊಂಡಿದ್ದು ಇಂದು ಅಥವಾ ನಾಳೆ ಚಾರ್ಜ್‌ಶೀಟ್ ಕೋರ್ಟ್‌ಗೆ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಎಸ್‌ಐಟಿ ಪೊಲೀಸರು ಚಾರ್ಜ್‌ಶೀಟ್ ಪೂರ್ಣಗೊಳಿಸುತ್ತಿದ್ದಾರೆ. ಆರೋಪ ಪಟ್ಟಿಯನ್ನು 2-3 ಬಾರಿ ಕಾನೂನು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಹೆಡ್ ಆಫ್ ದಿ ಚಾರ್ಜ್‌ಶೀಟ್ ಹೇಗಿರಬೇಕು? ಪ್ರಕರಣದಲ್ಲಿನ ಸಾಕ್ಷಿಗಳ ಹೇಳಿಕೆ ಎಲ್ಲಿ ಹಾಕಬೇಕು? ಡಿಜಿಟಲ್ ಸಾಕ್ಷ್ಯಗಳನ್ನು ಹೇಗೆ ನಮೂದಿಸಬೇಕು? ಹೀಗೆ ಎಲ್ಲಾ ಅಂಶಗಳಲ್ಲೂ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ಈ ರೀಪೋರ್ಟ್ಗಳೂ ಕೈ ಸೇರಿದ ನಂತರ ನಂತರ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಗೆ ಇನ್ನು ಹತ್ತು ದಿನವಷ್ಟೆ ಬಾಕಿ ಇದೆ. ಸೆಪ್ಟೆಂಬರ್ 10 ರೊಳಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಬೇಕಾಗಿರುತ್ತದೆ. ಬಹುತೇಕ ಸೆಪ್ಟೆಂಬರ್ 5 ರೊಳಗೆ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ.
ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ಗಳು ಬರುತ್ತಲೇ ಇವೆ. ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದ್ದು ಅಂತಿಮ ಹಂತದ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. 4000ಕ್ಕೂ ಹೆಚ್ಚು ಪುಟದ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಲಾಗಿದೆ. ಈ ಒಂದು ಕೇಸ್ನಲ್ಲಿ 60 ದಿನಗಳ ಕಾಲ ತನಿಖೆ ಮಾಡಿದ್ದು ಚಾರ್ಜ್ ಶೀಟ್ ಕೋರ್ಟ್‌ಗೆ ಸಲ್ಲಿಸೋಕೆ ಕೌಂಟ್ ಡೌನ್ ಶುರುವಾಗಿದೆ ಎನ್ನಲಾಗಿದೆ.
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಖುದ್ದು ಚಾರ್ಜ್‌ಶೀಟ್ ಡ್ರಾಫ್ಟ್ ಕಾಪಿ ಮೇಲೆ ನಿಗಾ ಇಟ್ಟಿದ್ದಾರೆ. ಬಹುತೇಕ ಪ್ರಕರಣದಲ್ಲಿ ಚಾರ್ಜ್‌ಶೀಟ್‌ನಲ್ಲಿರುವ ಲೋಪ ವಿಚಾರವನ್ನು ವಕೀಲರು ಪ್ರಸ್ತಾಪ ಮಾಡಿ ಆರೋಪಿಗಳನ್ನು ಪಾರು ಮಾಡುತ್ತಾರೆ. ಈ ಕಾರಣಕ್ಕೆ ಕಾನೂನು ತಜ್ಞರಿಂದ ಸಲಹೆ ಪಡೆದು ಆರೋಪ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.
ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದರೆ ಮುಂದೇನ್ಮಾಡ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ…


