BBMP
Loading ...

ಬೆಂಗಳೂರು: ಇದೇ ಜುಲೈ 27ರ ಶನಿವಾರದಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ಪತ್ರಿಕೋದ್ಯಮ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ನಡೆದ 11 ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ, ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಕೆ.ಎಸ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಾಜು ಸೇಠ್ ಅವರು ವಹಿಸಿಕೊಂಡಿದ್ದರು.. ಮುಖ್ಯ ಅತಿಥಿಗಳಾಗಿ ಡಾ. ರಾಜು ಕೃಷ್ಣಮೂರ್ತಿ, ಡಾ. ರಾಘವ್ ದಾನಿ, ಓಂ ಶಿವೋಹಂ ಚಿತ್ರದ ನಿರ್ಮಾಪಕರಾದ ಕೃಷ್ಣ, ಭರತನಾಟ್ಯ ಗುರು ಉಮಾಮಹೇಶ್ವರಿ, ಬೆಂಗಳೂರು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಎಲ್. ವೈ ಹಾಗೂ ಚಂದ್ರಿಕಾ ಬಿ.ವಿ ಜೊತೆಗೆ ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಅವರು ವಹಿಸಿಕೊಂಡಿದ್ದರು.

ಮಧ್ಯಾಹ್ನ 2:30ಕ್ಕೆ ಶುರುವಾದ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ಸತತವಾಗಿ ರಾತ್ರಿ ಒಂಬತ್ತು ಗಂಟೆಯವರೆಗೂ ಜರುಗಿತು. ವೀರಗಾಸೆ, ಗೊರವರ ಕುಣಿತ, ಭರತನಾಟ್ಯ, ಕರಾಟೆ, ವೆಸ್ಟರ್ನ್ ಡ್ಯಾನ್ ಸೇರಿದಂತೆ ಎಲ್ಲಾ ರೀತಿಯ ಕಲಾ ಪ್ರಕಾರಗಳು ಕೂಡ ಪ್ರದರ್ಶನ ಆಯಿತು. ಅಲ್ಲದೆ ಆಯ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ 60ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಿಸಲಾಯಿತು.

ಹೋಟೆಲ್, ಪಬ್, ಬಾರ್ ಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಬಿಬಿಎಂಪಿ!

Leave a Reply

Your email address will not be published. Required fields are marked *