BBMP
Loading ...

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿರುವ ಹೋಟೆಲ್‌, ಪಬ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಕಾಫಿ ಬಾರ್‌ಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ವಲಯ ಮಾಡದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿತ್ತು. ಆಗಾಗ್ಗೆ ನಿಯಮ ಉಲ್ಲಂಘನೆ ಪ್ರಕರಣಗಳೂ ದಾಖಲಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಹೋಟೆಲ್, ಪಬ್, ಬಾರ್ ಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ.

30 ಕೊಠಡಿಗಳಿಗಿಂತ ಮೇಲ್ಪಟ್ಟ ಹೋಟೆಲ್ , ಬಾರ್ & ರೆಸ್ಟೋರೆಂಟ್, ಪಬ್ ಇದ್ದರೆ 30 ಕುರ್ಚಿ ಇರುವ ಧೂಮಪಾನ ಪ್ರದೇಶ ನಿಗದಿ ಮಾಡಬೇಕು ಧೂಮಪಾನ ವಲಯ ನಿರ್ಮಾಣ ಮಾಡಿ ಪೋಟೋ ಸಮೇತ ಸ್ಮೋಕಿಂಗ್ ಝೂನ್‌ಗೆ ಪರವಾನಗಿಗೆ ಅರ್ಜಿ ಹಾಕಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಯಮಾನುಸಾರ ಸ್ಮೋಕಿಂಗ್ ಝೂನ್ ಇದೆಯೇ ಅಂತ ರಿಪೋರ್ಟ್ ಕೊಟ್ಟರೆ, ಆಮೇಲೆ ಎನ್‌ಒಸಿ ವಿತರಣೆಗೆ ಸೂಚನೆ ನೀಡಲಾಗುತ್ತದೆ.

ಸ್ಮೋಕಿಂಗ್ ಏರಿಯಾ ಕೊಠಡಿಗೆ ಎಂಟ್ರಿ ಆದಾಗ ಸ್ವಯಂಚಾಲಿತವಾಗಿ ಬಾಗಿಲು ಬಂದ್‌ ಆಗುವ ರೀತಿಯಲ್ಲಿ ಇರಬೇಕು. ಸ್ಮೋಕಿಂಗ್ ಏರಿಯಾ ಅಂತ ನಾಮಫಲಕ ದೊಡ್ಡದಾಗಿ ಇರಬೇಕು. 60-30ರ ನಿಯಮದಲ್ಲಿ ಅಕ್ಷರಗಳು ಇರಬೇಕು. ಸ್ಮೋಕಿಂಗ್‌ ಝೂನ್‌ಗಳಲ್ಲಿ ಏರ್‌ ಫ್ಲೋ ಸಿಸ್ಟಂ ಇರಬೇಕು. ಪಕ್ಕದ ಮನೆ ಅಥವಾ ಪಕ್ಕದ ಕಟ್ಟಡಗಳಿಗೆ ಹೊಗೆ ಹೋಗುವಂತೆ ಇರಬಾರದು. ಸ್ಮೋಕಿಂಗ್ ಝೂನ್ ನಿಯಮ ಉಲ್ಲಂಘನೆಯಾದ್ರೆ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.

ವಿದ್ಯುತ್​ ಗುತ್ತಿಗೆದಾರರ ಸಂಘದ ಬೆಳಗಾವಿ ಜಿಲ್ಲಾ ಸಮಿತಿಯಿಂದ ವಾರ್ಷಿಕ ಸಭೆ, ರಕ್ತದಾನ ಶಿಬಿರ ಯಶಸ್ವಿ

Leave a Reply

Your email address will not be published. Required fields are marked *