BBMP
Loading ...

HESCOM

Greater Bengaluru News9 : ಕಾಮಗಾರಿಯ ಬಿಲ್ ಪಾವತಿಸಲು ಲಂಚಕ್ಕೆ ಬೇಡಿಕೆ ಇರಿಸಿದ್ದ ಹೆಸ್ಕಾಂ ಇಇ ಬುಧವಾರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಬಸವನಬಾಗೇವಾಡಿಯ ಹೆಸ್ಕಾಂ ಇಇ ಸಿದ್ರಾಮ ಮಲ್ಲಿಕಾರ್ಜುನ ಬಿರಾದಾರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.

ನಾಲ್ಕೈದು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು ಎರಡು ಲಕ್ಷ ಮೊತ್ತದ ಬಿಲ್‌ಮೊತ್ತ ಕೊಡಲು ಇಇ ಸಿದ್ರಾಮ ಬಿರಾದಾರ 15 ಸಾವಿರ‌ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು, ಅದರಲ್ಲಿ ಈಗಾಗಲೇ ಐದು ಸಾವಿರ ಪಡೆದುಕೊಂಡಿದ್ದರು.

ಬುಧವಾರ ಕಚೇರಿಯಲ್ಲಿ ಹತ್ತು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಹೊಂಚು ಹಾಕಿ ಸಾಕ್ಷ್ಯ ಸಮೇತ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದೂರು ದಾಖಲಾಗಿರುವ ಹಿನ್ನೆಲೆ ಆರೋಪಿ ಸಿದ್ರಾಮ ಬಿರಾದಾರ ಅವರನ್ನು ಬೆಂಗಳೂರು ಲೋಕಾಯುಕ್ತ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.

ಬೆಂಗಳೂರು ಲೋಕಾಯುಕ್ತ ಡಿವೈಎಸ್ಪಿ ಪುಟ್ಟ ಓಬಳರೆಡ್ಡಿ ಮತ್ತು ವಸಂತ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಲೋಕಾಯುಕ್ತ ಪಿಐ ರಾಮಪ್ಪ ಸಾವಳಗಿ, ಎಸ್.ಬಿ.ಪಾಟೀಲ, ರಾಜಶೇಖರಯ್ಯ‌ ಹಾಗೂ ಸಿಬ್ಬಂದಿಗಳು ತಂಡದಲ್ಲಿದ್ದರು.

Leave a Reply

Your email address will not be published. Required fields are marked *