BBMP
Loading ...

ಬೆಂಗಳೂರು:- ಒಂದೆಡೆ ಉಪಚುನಾವಣೆ ಕಾವು ರಂಗೇರಿದ್ದು, ಮತ್ತೊಂದು ಕಡೆ ಜೆಡಿಎಸ್ ನಲ್ಲೇ ಅಸಮಾಧಾನ ಸ್ಪೋಟಗೊಂಡಂತೆ ಕಾಣುತ್ತಿದೆ.

ಉಪಚುನಾವಣೆ ಹಿನ್ನೆಲೆ, ಜೆಡಿಎಸ್​​ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 40 ನಾಯಕರನ್ನು ಒಳಗೊಂಡ ಪಟ್ಟಿ ಇದಾಗಿದ್ದು, ಇದರಲ್ಲಿ ದೇವೇಗೌಡ, ಎಚ್​ಡಿ ಕುಮಾರಸ್ವಾಮಿ ಸೇರಿದಂತೆ ಶಾಸಕರು, ಮಾಜಿ ಶಾಸಕ ಒಳಗೊಂಡಿದ್ದಾರೆ. ಆದ್ರೆ, ಅಚ್ಚರಿ ಅಂದರೆ ಈ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೋರ್​ ಕಮಿಟಿ ಅಧ್ಯಕ್ಷರನ್ನೇ ಕೈಬಿಡಲಾಗಿದೆ. ಅಲ್ಲದೇ ಶಾಸಕ ಎಚ್​ಡಿ ರೇವಣ್ಣ ಅವರಿಗೂ ಕೋಕ್ ನೀಡಲಾಗಿದೆ.

ಚನ್ನಪಟ್ಟಣ ಉಪ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಿದ್ದು ಈ ಸಂಬಂಧ ಪಕ್ಷ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಜೆಡಿಎಸ್​ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಹೆಸರನ್ನು ಕೈ ಬಿಡಲಾಗಿದೆ.

ಜೆಡಿಎಸ್ ಸ್ಟಾರ್ ಕ್ಯಾಂಪೇನರ್​​ಗಳ ಪಟ್ಟಿಯಲ್ಲಿ ಶಾಸಕರು, ಮಾಜಿ ಶಾಸಕರು, ಮಾಜಿ, ಹಾಲಿ ಸಂಸದರು, ಹಿರಿಯ ನಾಯಕರು, ಮಾಜಿ, ಹಾಲಿ ಎಂಎಲ್​ಸಿಗಳು ಸೇರಿ ಒಟ್ಟು 40 ಪ್ರಚಾರಕರು ಹೆಸರು ಇದೆ. ಆದರೆ ಪಕ್ಷದ ಹಿರಿಯ ನಾಯಕ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರ ಹೆಸರು ಪಟ್ಟಿಯಲ್ಲಿ ಇಲ್ಲ. ಇದಕ್ಕೆ ಬಲವಾದ ಕಾರಣವೂ ಸಹ ಇದೆ.

Leave a Reply

Your email address will not be published. Required fields are marked *