BBMP
Loading ...

ಪಾಟ್ನಾ: ಚಿತ್ರ ವಿಚಿತ್ರ ಕಾರಣಗಳಿಗೆ ಡಿವೋರ್ಸ್ ನೀಡಿದ ಊದಾಹರಣೆಗಳಿವೆ. ಕ್ಷುಲ್ಲಕ ಕಾರಣ ನೀಡಿ ವಿಚ್ಛೇದನ ಪಡೆದ ಹಲವು ಘಟನೆಗಳು ಸಾಲಿಗೆ ಇದೀಗ ಹೊಸ ಸೇರ್ಪಡೆಯಾಗಿದೆ. ಗಂಡ ತನಗೆ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದಿಲ್ಲ ಎಂಬ ಕಾರಣಕ್ಕೆ ಡಿವೋರ್ಸ್ ಕೇಳಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಮಹಿಳೆಗೆ ನಿತ್ಯ 5 ರೂಪಾಯಿ ಮೌಲ್ಯದ ಕುರ್ಕುರೆ ತಿನ್ನುವ ಅಭ್ಯಾಸವಿತ್ತು. ಇದರಿಂದಾಗಿ ನಿತ್ಯ ಮಹಿಳೆ ಪತಿಯ ಬಳಿ ಕುರ್ಕುರೆಗಾಗಿ ಬೇಡಿಕೆ ಇಡುತ್ತಿದ್ದಳು. ಆದರೆ 5 ರೂಪಾಯಿ ಕುರ್ಕುರೆ ತರಲು ಮರೆತೇ ಹೋಗಿದ್ದಾನೆ.

ಆದರೆ ಒಂದು ದಿನ ಪತಿ ಕುರ್ಕುರೆ ತರಲು ಮರೆತು ಹೋದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ತನ್ನ 5 ರೂಪಾಯಿಯ ಬೇಡಿಕೆ ಈಡೇರಿಸುವುದು ಕೂಡಾ ಸಾಧ್ಯವಾಗಿಲ್ಲ ಎಂದು ಪತ್ನಿ ಕೋಪಗೊಂಡು ಹೆತ್ತವರ ಮನೆಗೆ ತೆರಳಿದ್ದಾಳೆ. ಪೊಲೀಸರು ಈ ಕೌಟುಂಬಿಕ ಕಳಹದ ಪ್ರಕರಣವನ್ನು ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್ ಗೆ ತಿಳಿಸಿದ್ದು, ಅಲ್ಲಿ ದಂಪತಿಗೆ ಕೌನ್ಸಿಲಿಂಗ್ ಮಾಡಿ, ಸಲಹೆಗಳನ್ನು ನೀಡಲಾಗಿದೆ. ಸ್ವಲ್ಪ ದಿನಗಳ ನಂತರ ಮತ್ತೊಮ್ಮೆ ಕೌನ್ಸಿಲಿಂಗ್ ಬರುವಂತೆ ದಂಪತಿಗೆ ಸೂಚಿಸಲಾಗಿದೆ.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಕೌನ್ಸಲರ್, ಮಹಿಳೆಗೆ ಕುರ್ ಕುರೇ ತಿನ್ನಲು ಇರುವ ಅತಿಯಾದ ಬಯಕೆಯೇ ದಂಪತಿ ನಡುವೆ ಬಿರುಕು ಬರಲು ಕಾರಣ ಎಂದು ತಿಳಿಸಿದ್ದಾರೆ. ಮತ್ತೊಮ್ಮೆ ಕೌನ್ಸಿಲಿಂಗ್ ಮೂಲಕ ದಂಪತಿಯನ್ನು ಒಂದು ಮಾಡುವ ಪ್ರಯತ್ನಗಳು ನಡೆಯಬಹುದು.

ಪತಿ ತನಗೆ ಹೊಡೆಯುತ್ತಾನೆ ಎಂದು ಹೆಂಡತಿ ಹೇಳಿದರೆ, 5 ರೂಪಾಯಿ ಬೆಲೆಯ ಕುರ್ಕುರೆಗೆ ಹೆಂಡತಿ ಜಗಳವಾಡಿದ್ದಾಳೆ. ಕುರ್ಕುರೆ ಸಿಗದಿದ್ದಾಗ ಆಕೆಯ ತಾಯಿಯ ಮನೆಗೆ ಹೋಗಿದ್ದಾಳೆ ಎಂದು ಪತಿ ಹೇಳಿದ್ದಾನೆ. ಪ್ರಕರಣವನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕದಂದು ಇಬ್ಬರ ನಡುವೆ ರಾಜಿಯಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *