BBMP
Loading ...

Actor Darshan

Greater Bengaluru News9 : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಅವರ ತಂಡದ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೈಲು ಸೌಲಭ್ಯಗಳ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ದರ್ಶನ್‌ಗೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ. ದರ್ಶನ್‌ಗೆ ನೀಡಲಾಗುತ್ತಿರುವ ಕನಿಷ್ಠ ಸೌಲಭ್ಯಗಳ ಕುರಿತು ಕಾನೂನು ಪ್ರಾಧಿಕಾರ ಸಲ್ಲಿಸಿದ ವರದಿ, ನಟನ ವಿರುದ್ಧವಾಗಿದೆ.

ಈ ವರದಿ ತಿಳಿದ ಕ್ಷಣದಲ್ಲೇ ದರ್ಶನ್ ಜೈಲಿನೊಳಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಾನು ಯಾರಿಗೆ ಅನ್ಯಾಯ ಮಾಡಿದ್ದೇನೆ? ನನಗೆ ಯಾಕೆ ಈ ಶಿಕ್ಷೆ? ಹೀಗೆ ಜೈಲಿನಲ್ಲೇ ಸಾಯಬೇಕಾ? ಎಂದು ಕೂಗಾಡಿದ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಇದುವರೆಗೆ ತಾಳ್ಮೆಯಿಂದ ಇದ್ದ ದರ್ಶನ್ ವರದಿ ವಿಚಾರ ತಿಳಿದು ತಾಳ್ಮೆ ಕಳೆದುಕೊಂಡಿದ್ದಾರೆ. ಅವರ ಕೋಪ ನೋಡಿ ಸಹಚರರು ಬೆಚ್ಚಿಬಿದ್ದಿದ್ದಾರೆ. ಮ್ಯಾನೇಜರ್ ನಾಗರಾಜ್ ನಟನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.

ಕೆಲ ಹೊತ್ತಿನ ಬಳಿಕ ದರ್ಶನ್ ಮೌನ ವಹಿಸಿ ಯಾರೊಂದಿಗೂ ಮಾತನಾಡದೆ ಒಂಟಿಯಾಗಿ ಕುಳಿತಿದ್ದರು ಎಂದು ಹೇಳಲಾಗಿದೆ. ಈ ಘಟನೆಯ ಬಳಿಕ ದರ್ಶನ್ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ವಕೀಲರೊಂದಿಗೆ ಚರ್ಚೆ ನಡೆಸಿ, ಸೋಮವಾರದೊಳಗೆ ಅಧಿಕೃತವಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *