BBMP
Loading ...

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ರಾಜಾತಿಥ್ಯ ವಿಚಾರದ ಕುರಿತು ಇಂದು ಜೈಲಿನಲ್ಲೇ ವಿಚಾರಣೆ ನಡೆಸಲಾಗಿದ್ದು, ಜೈಲಿನಲ್ಲಿ ತಮಗೆ ಸಿಗರೇಟ್ ಕೊಟ್ಟಿದ್ದು ಯಾರು ಎಂದು ದರ್ಶನ್ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರವಾಗಿ ದಾಖಲಾಗಿರುವ ಎರಡು ಎಫ್ ಐಆರ್ ಹಿನ್ನೆಲೆಯಲ್ಲಿ ಇಂದು ಜೈಲಿನಲ್ಲಿ ನಟ ದರ್ಶನ್ ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆಗೆ ಸಿಗರೇಟ್ ಕೊಟ್ಟ ಸೀಕ್ರೇಟ್ ಬಿಚ್ಚಿಟ್ಟಿದ್ದು, ತಮಗೆ ಸಿಗರೇಟ್ ನಾಗ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ ತಮ್ಮಿಂದಾಗಿ ಜೈಲು ಅಧಿಕಾರಿಗಳು ಸಸ್ಪೆಂಡ್ ಆಗಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.

ನಟ ದರ್ಶನ್ ಸಿಗರೇಟ್ ಸೇದುತ್ತಿರುವ ಫೋಟೋ ತೆಗೆದ ಮೊಬೈಲ್ ಯಾರದ್ದು ಎಂದು ತಿಳಿದುಬಂದಿಲ್ಲ. ಆದರೆ ದರ್ಶನ್ ಗೆ ವಿಡಿಯೋ ಕಾಲ್ ಮಾಡಿದ್ದ ಧರ್ಮನ ಮೊಬೈಲ್ ಅನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೈಕೋರ್ಟ್‌ ಛೀಮಾರಿ ಹಾಕಿದ ಬಳಿಕ ಎಚ್ಚೆತ್ತ ಬೆಸ್ಕಾಂ: 6-8 ತಿಂಗಳಲ್ಲಿ ಎಲ್ಲ ಸೇವೆಗೂ ಯುಪಿಐ ವ್ಯವಸ್ಥೆಯ ಭರವಸೆ

Leave a Reply

Your email address will not be published. Required fields are marked *