BBMP
Loading ...

ಕೆಂಭಾವಿ: ಪಟ್ಟಣದಲ್ಲಿ ವಿದ್ಯುತ್‌ ತಂತಿ ದುರಸ್ತಿ ಮಾಡುವಾಗ ದಿಢೀ‌ರ್ ವಿದ್ಯುತ್‌ ಪ್ರವಹಿಸಿ ದೇವಿಕೇರಿ ಗ್ರಾಮದ ಕಾರ್ಮಿಕ ರಾಯಪ್ಪ (30) ಗಂಭೀರ ಗಾಯಗೊಂಡಿದ್ದಾರೆ.

ಕಳೆದ ವಾರ ಮಳೆ ಗಾಳಿಗೆ ಪಟ್ಟಣದ ವಿವಿಧೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಖಾಸಗಿ ಗುತ್ತಿಗೆದಾರರ ಬಳಿ ಕಾರ್ಮಿಕನಾಗಿರುವ ರಾಯಪ್ಪ ಎಚ್.ಟಿ. (ಹೈಟೆನ್ಮನ್ ವೈ‌ರ್) ಭಾನುವಾರ ವಿದ್ಯುತ್ ಕಂಬವೇರಿ ತಂತಿ ಎಳೆಯುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಕಂಬದ ಮೇಲೆ ನೇತಾಡುತ್ತ ಆತನ ಸ್ಥಿತಿ ಚಿಂತಾಜನಕವಾಗಿದ್ದು, ಒಂದು ಕಾಲು ಸಂಪೂರ್ಣ ಸುಟ್ಟಿದ್ದು, ಮತ್ತೊಂದು ಮುರಿದಿದೆ. ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗುತ್ತಿಗೆದಾರರ ವಿರುದ್ಧ ಆಕ್ರೋಶ: ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೆ ಕಾರ್ಮಿಕರನ್ನು ಮನಬಂದಂತೆ ದುಡಿಸಿಕೊಳ್ಳುತ್ತಿರುವುದೇ ಇಂಥ ಅವಘಡಗಳಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಂಥ ಸ್ಥಿತಿಗೆ ಗುತ್ತಿಗೆದಾರರೇ ನೇರ ಹೊಣೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ರಾಯಪ್ಪನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಜೆಸ್ಕಾಂ ಹಾಗೂ ಗುತ್ತಿಗೆದಾರರು ಆರ್ಥಿಕವಾಗಿ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ನೌಕರ ಲಂಚ ಪಡೆದಿದ್ದಲ್ಲಿ ಶಿಕ್ಷೆ ಎದುರಿಸಲು ಸಹ ರೆಡಿಯಾಗಿರಬೇಕು: ಹೈಕೋರ್ಟ್ ಮಹತ್ವದ ತೀರ್ಪು

Leave a Reply

Your email address will not be published. Required fields are marked *