BBMP
Loading ...

Siddaramaiah

ಬೆಂಗಳೂರು: ವಿಧಾನಸೌಧದ ಗ್ರ‍್ಯಾಂಡ್ ಸ್ಟೆಪ್ ನಲ್ಲಿ 200ನೇ ಕಿತ್ತೂರು ವಿಜಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಇಂದು ಸಿಎಂ ಚಾಲನೆ ನೀಡಿದರು. ಈ ವೇಳೆ ಜ್ಯೋತಿ ಬೆಳಗುವ ವೇಳೆ ಸಿಎಂ ಸಿದ್ದರಾಮಯ್ಯ ಅವರ ಬಟ್ಟೆಗೆ ಬೆಂಕಿಯ ಬಿಸಿ ತಾಗಿದ ಘಟನೆ ನಡೆದಿದೆ.

ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡಿದ ಬಳಿಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಜಾಗ ಬಿಡಲು ಸಿಎಂ ಮುಂದಾದರು.

ಈ ವೇಳೆ ಸಿಎಂ ದೀಪದ ಹತ್ತಿರ ಬಂದಾಗ ಎಡಕೈಗೆ ಬೆಂಕಿಯ ಕಿಡಿ ತಾಗಿದೆ. ಬಟ್ಟೆಗೆ ಆಕಸ್ಮಿಕವಾಗಿ ತಾಕಿದ ಕಿಡಿಯನ್ನು ಕೂಡಲೇ ಭದ್ರತಾ ಸಿಬ್ಬಂದಿ ಆರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿವಕುಮಾರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಉಪಸ್ಥಿತರಿದ್ದರು.

ಶಾಸಕ ಮುನಿರತ್ನ ಮನೆಯಲ್ಲಿ ಎಸ್​ಐಟಿ ದಾಳಿ: ಪೆನ್​ಡ್ರೈವ್​ನಲ್ಲಿ ರಾಜಕೀಯ ನಾಯಕರ ಖಾಸಗಿ ವಿಡಿಯೋ ಪತ್ತೆ!

Leave a Reply

Your email address will not be published. Required fields are marked *