BBMP
Loading ...

Muniratna new

ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ವಿರುದ್ದ ಜೂನ್​​ನಲ್ಲೇ ದೂರು ದಾಖಲಾಗಿತ್ತು. ಜೂನ್​​ನಲ್ಲಿಯೇ ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತ ಮಹಿಳೆ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಅರ್ಜಿಯಾಗಿ ಪಡೆದುಕೊಂಡಿದ್ದ ಪೊಲೀಸರು ಅರ್ಜಿ ಸಂಬಂಧ ವಿಚಾರಣೆಗೆ ಸಾಕ್ಷಿ ನೀಡುವಂತೆ ದೂರುದಾರೆಗೆ ತಿಳಿಸಿದ್ದರು. ಈ ಸಂಬಂಧ ದೂರುದಾರೆಗೆ ನೋಟಿಸ್ ನೀಡಲಾಗಿತ್ತು.

ಆದ್ರೆ ದೂರುದಾರೆ ಪೊಲೀಸರ ಮುಂದೆಯೇ ಹಾಜಾರಾಗಿರಲಿಲ್ಲ. ಹೀಗಾಗಿ ಪೊಲೀಸರು ವಿಚಾರಣೆಯನ್ನು ಹಾಗೇಯೇ ಬಿಟ್ಟಿದ್ದರು. ಈಗ ಮತ್ತೆ ಅದೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರಿಂದ ಕೇಸ್ ದಾಖಲು ಮಾಡಿ ಅರೆಸ್ಟ್ ಮಾಡಲಾಗಿತ್ತು. ಆದರೆ ಈ ವಿಚಾರವಾಗಿ ಕೆಲ‌ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.ಸಂತ್ರಸ್ತೆ ಈ ಹಿಂದೆ ದೂರು ಕೊಟ್ಟಿದ್ದರೂ ಆಗ ಪೊಲೀಸರು ಎಫ್​ಐಆರ್ ದಾಖಲಿಸಿರಲಿಲ್ಲ. ಹೀಗಾಗಿ ದೂರು‌ ಕೊಟ್ಟರೂ ಯಾಕೆ ಪೊಲೀಸರು ಎಫ್​ಐಆರ್ ದಾಖಲಿಸಿಲ್ಲ ಎಂಬ ಪ್ರಶ್ನೆ ಮೂಡಿದೆ.

ಅದಲ್ಲದೆ ಮತ್ತೊಂದು ಸ್ಟೋಟಕ ಅಮಶಗಳು ಬೆಳಕಿಗೆ ಬರುತ್ತಿವೆ. ಶಾಸಕ ಮುನಿರತ್ನ ಅವರ ಮನೆ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಲ್ಯಾಪ್‌ಟಾಪ್‌ ಮತ್ತು ಪೆನ್‌ಡ್ರೈವ್‌ಗಳಲ್ಲಿ ಬಿಜೆಪಿ ಸೇರಿದಂತೆ ಕೆಲ ರಾಜಕೀಯ ನಾಯಕರ ಖಾಸಗಿ ಕ್ಷಣದ ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸ್‌ ಉನ್ನತ ಮೂಲಗಳು ಹೇಳಿವೆ.

ವೈಯಾಲಿ ಕಾವಲ್‌ನಲ್ಲಿರುವ ಮುನಿರತ್ನರ ಮನೆಯಲ್ಲಿಶೋಧ ಕಾರ್ಯಾಚರಣೆ ವೇಳೆ ಸಿಕ್ಕ ಲ್ಯಾಪ್‌ಟಾಪ್‌ ಮತ್ತು ಪೆನ್‌ಡ್ರೈವ್‌ಗಳಲ್ಲಿ ಕೆಲ ರಾಜಕೀಯ ನಾಯಕರ ಹಾಗೂ ಸರಕಾರಿ ಅಧಿಕಾರಿಗಳ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಮಹಿಳೆಯರ ಅಶ್ಲೀಲ ದೃಶ್ಯಗಳು ವಿಡಿಯೊದಲ್ಲಿವೆ. ಹನಿಟ್ರ್ಯಾಪ್‌ ಮೂಲಕ ಈ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿರುವ ಶಂಕೆಯಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಮುನಿರತ್ನರ ಮೊಬೈಲ್‌ನಲ್ಲಿ ಹನಿಟ್ರ್ಯಾಪ್‌ನ ಸಾಕಷ್ಟು ವಿಡಿಯೋ ಮತ್ತು ಆಡಿಯೋಗಳು ಇರುವ ಬಗ್ಗೆ ಸುಳಿವು ಸಿಕ್ಕಿದೆ.

ಹೀಗಾಗಿ, ಮುನಿರತ್ನರ ಮೊಬೈಲ್‌ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದೆ. ಆದರೆ, ಆ ಮೊಬೈಲ್‌ ಕೋಲಾರದಲ್ಲಿ ಕಳೆದು ಹೋಗಿರುವುದಾಗಿ ಮುನಿರತ್ನ ಹೇಳಿದ್ದಾರೆ. ಮೊಬೈಲ್‌ನ ಐಎಂಇಐ ನಂಬರ್‌ ವಿವರ ಆಧರಿಸಿ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2024ರ ಮೈಸೂರು ದಸರಾ ನವರಾತ್ರಿ ಕಾರ್ಯಕ್ರಮಗಳ ಪೂರ್ಣ ಪಟ್ಟಿ ರಿಲೀಸ್: ಎಲ್ಲೆಲ್ಲಿ, ಯಾವ್ಯಾವ ಪ್ರೋಗ್ರಾಂ?

Leave a Reply

Your email address will not be published. Required fields are marked *