ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗಉದ್ಘಾಟನೆ ಇನ್ನಷ್ಟು ವಿಳಂಬವಾಗುತ್ತಿರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಸಂಸದ, ನಿಮಗೆಲ್ಲರಿಗೂ ತಿಳಿದಿರುವಂತೆ, ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆಯ ಪ್ರಾರಂಭವು ಬಿಎಂಆರ್ಸಿಎಲ್ ನೀಡಿದ ಎಲ್ಲಾ ಗಡುವನ್ನು ಪೂರೈಸುವಲ್ಲಿ ವಿಫಲವಾಗಿದೆ. ಇದು ನಮ್ಮೆಲ್ಲರನ್ನು ನಿರಾಶೆಗೊಳಿಸಿದೆ. ರೈಲುಗಳ ಅಲಭ್ಯತೆಯೇ ಕಾರ್ಯಾಚರಣೆ ವಿಳಂಬಕ್ಕೆ ಪ್ರಮುಖ ಕಾರಣ. ಇದೀಗ ಕೆಲವು ಒಳ್ಳೆಯ ಸುದ್ದಿಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ, ಉತ್ಪಾದನೆಯನ್ನು ತ್ವರಿತಗೊಳಿಸಲು ನಾನು ರೈಲು ತಯಾರಕರಾದ ತೀತಗಢ್ ರೈಲ್ ಸಿಸ್ಟಮ್ಸ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಎಂಜಿನಿಯರ್ಗಳಿಗೆ ವೀಸಾ ಸೇರಿದಂತೆ ಹಲವು ರಸ್ತೆ ತಡೆಗಳನ್ನು ಪರಿಹರಿಸಲಾಗಿದೆ.
ಈಗ ಜನವರಿ 6 ರಂದು ಬೆಂಗಳೂರಿಗೆ ಕಳುಹಿಸಲು ಮೊದಲ ರೈಲು ಸಿದ್ಧವಾಗಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲನ್ನು ಮತ್ತು ಏಪ್ರಿಲ್ನಲ್ಲಿ ಮೂರನೇ ರೈಲನ್ನು ತಲುಪಿಸುವುದಾಗಿ ತೀತಗಢ್ ತಿಳಿಸಿದೆ. ಅದಾದ ಬಳಿಕ, ತಿಂಗಳಿಗೆ 1 ರೈಲನ್ನು ಸರಬರಾಜು ಮಾಡುವುದಾಗಿ ಹೇಳಿದೆ. ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ 2 ರೈಲುಗಳಿಗೆ ಇದು ಹೆಚ್ಚಾಗುತ್ತದೆ. ಎಲ್ಲಾ CMRS ಅನುಮೋದನೆಗಳನ್ನು ಪಡೆಯಲು ಸರಿಯಾಗಿ ಕೆಲಸ ಮಾಡಲು ನಾನು BMRCLಗೆ ತಿಳಿಸಿದ್ದೇನೆ.
ಕೇಂದ್ರದ ನಗರಾಭಿವೃದ್ಧಿ ಇಲಾಖೆ ಸಚಿವರಿಗೂ ಜನವರಿ 6 ರಂದು ತೀತಗಢಕ್ಕೆ ತೆರಳಿ ಪರಿಶೀಲಿಸಲು ಮನವಿ ಮಾಡಿಕೊಂಡಿದ್ದೇನೆ. ಇನ್ಮುಂದೆ ಯಾವುದೇ ರೀತಿಯ ಅಡ್ಡಿಗಳು ಬರದಂತೆ ನೋಡಿಕೊಳ್ಳುತ್ತೇವೆ. ಶೀಘ್ರದಲ್ಲೇ ಹಳದಿ ಮೆಟ್ರೋ ಮಾರ್ಗ ಕಾರ್ಯಾಚರಣೆ ಆಗಲಿದೆ ಎಂದು ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.
ಮಾರ್ಚ್ ನಲ್ಲಿ ಯಲ್ಲೋ ಲೈನ್ ನಲ್ಲಿ ವಾಣಿಜ್ಯ ಸಂಚಾರಕ್ಕೆ BMRCL ಸಿದ್ದತೆ ನಡೆಸಿದ್ದು, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗ ಸಿದ್ಧವಾಗಿದೆ. 18.82 ಕಿ.ಮೀ ಉದ್ದದ 16 ಎಲಿವೇಟೆಡ್ ನಿಲ್ದಾಣಗಳೊಂದಿಗೆ ಹಳದಿ ಮಾರ್ಗ ಸಿದ್ಧವಾಗಿದ್ದು, ಎಲ್ಲಾ ಪರೀಕ್ಷೆಗಳನ್ನ ಮುಗಿಸಿ ರೈಲಿಗಾಗಿ BMRCL ಕಾಯಿತ್ತಿದೆ. ಜನವರಿ15ಕ್ಕೆ ಬೆಂಗಳೂರಿಗೆ ಲೋಕೋ ಪೈಲೆಟ್ ಲೆಸ್ ರೈಲು ಬರಲಿದ್ದು, ಚೀನಾದಿಂದ ಸಮುದ್ರ ಮಾರ್ಗವಾಗಿ ಚೈನೈಗೆ ಪ್ರಯಾಣ ಮಾಡಲಾಗುತ್ತದೆ. ಬಳಿಕ ರಸ್ತೆ ಮಾರ್ಗವಾಗಿ ಮೂಲ ಮಾದರಿ ರೈಲು ಬೊಮ್ಮಸಂದ್ರ ಪ್ರವೇಶ ಮಾಡಲಿದೆ. ಈ ಬೆನ್ನಲ್ಲೇ ಮೂರನೇ ರೈಲು ಸಹ ರೀಚ್ ಸಾಧ್ಯತೆ ಇದೆ. ಅಂದುಕೊಂಡಂತೆ ಆದ್ರೆ ಎಲ್ಲೋ ಲೈನ್ ಮೆಟ್ರೋ ವಾಣಿಜ್ಯ ಸಂಚಾರ ಫಿಕ್ಸ್ ಎನ್ನಲಾಗಿದೆ.
ಭಾರವಾಗಲಿದೆ ಪ್ರಯಾಣಿಕರ ಜೇಬು: ಸಂಕ್ರಾಂತಿ ಬಳಿಕ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ!


