BBMP
Loading ...

images (5)

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುಣಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ದೆಹಲಿಯಲ್ಲಿ ಆಡಳಿತರೂಢ ಎಎಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಯುವ ಕನಸು ಕಂಡಿತ್ತು. 2015 ಹಾಗೂ 2020 ರ ಅವಧಿಯಲ್ಲಿನ ಚುನಾವಣೆಯಲ್ಲಿ ಎಎಪಿ ಭರ್ಜರಿ ಗ್ಯಾರಂಟಿಗಳನ್ನ ನೀಡುವ ಮೂಲಕ ಅಧಿಕಾರಕ್ಕೆ ಬಂದಿತ್ತು. ಈ ಬಾರಿಯೂ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್‌ ಕನಸು ಕಂಡಿದ್ದು, ಕೇಜ್ರಿವಾಲ್‌ ಕನಸು ನುಚ್ಚು ನೂರಾಗಿದೆ.

2015 ಹಾಗೂ 2020 ರ ಅವಧಿಯಲ್ಲಿನ ಚುನಾವಣೆಗೂ ಎಎಪಿ ಭರ್ಜರಿ ಗ್ಯಾರಂಟಿಗಳನ್ನ ನೀಡುವ ಮೂಲಕ ದೆಹಲಿ ಜನತೆಯ ಮನಗೆದಿದ್ರು. ಆದರೆ, 2025 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಮಾತ್ರವಲ್ಲದೇ ಬಿಜೆಪಿ ಹಾಗೂ ಕಾಂಗ್ರೆಸ್‌ ಸಹ ಗ್ಯಾರಂಟಿ ಅಸ್ತ್ರವನ್ನ ಪ್ರಯೋಗ ಮಾಡಿದೆ. ಅಲ್ಲದೇ ಸಾಲು ಸಾಲು ಗ್ಯಾರಂಟಿಗಳನ್ನ ಕೊಟ್ಟ ಎಎಪಿ ಪಕ್ಷವನ್ನ ಈ ಬಾರಿ ದೆಹಲಿ ಜನತೆ ಕೈ ಹಿಡಿಯುವುದಿಲ್ಲ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿದ್ವು. ಅದರಂತೆ ದೆಹಲಿಯಲ್ಲಿ ಬಿಜೆಪಿ ಬರೋಬ್ಬರಿ 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಬಿಡಿದಿದ್ದು, 70 ಕ್ಷೇತ್ರಗಳ ಪೈಕಿ 46 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಭಷ್ಟ್ರಚಾರ ರಹಿತ ಆಡಳಿತವನ್ನ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಎಎಪಿ ಹಲವು ಹಗರಣಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅಬಕಾರಿ ಹಗರಣ, ಶೀಷ್‌ಮಹಲ್‌ ಬಂಗಲೆ ವಿವಾದ, ಕೇಜ್ರಿವಾಲ್‌, ಸಿಸೋಡಿಯಾ ಸೇರಿದಂತೆ ಸಚಿವರ ವಿರುದ್ಧ ಸಾಲು ಸಾಲು ಭ್ರಷ್ಟಾಚಾರ ಆರೋಪಗಳು ಆಪ್‌ಗೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ. 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಗಮನಾರ್ಹ ಸೋಲನ್ನು ಅನುಭವಿಸಿದೆ. ರಾಜಧಾನಿಯಲ್ಲಿ ತನ್ನ ದಶಕದ ಪ್ರಾಬಲ್ಯವನ್ನು ಕೊನೆಗೊಳಿಸಿದೆ. ಹಾಗಾದ್ರೆ ದೆಹಲಿಯಲ್ಲಿ ಎಎಪಿ ಸೋಲಿಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಆಡಳಿತ ವಿರೋಧಿ ಅಲೆ

ಕಳೆದ ಹತ್ತು ವರ್ಷಗಳ ಕಾಲ ದೆಹಲಿ ಜನತೆಗೆ ಗ್ಯಾರಂಟಿಗನ್ನ ನೀಡುತ್ತಾ ಅಧಿಕಾರಕ್ಕೆ ಬಂದ ಎಎಪಿಗೆ ಪ್ರಬಲವಾಗಿ ಆಡಳಿತ ವಿರೋಧಿ ಅಲೆ ಎದುರಾಗಿತ್ತು. ಆರೋಗ್ಯ, ಶಿಕ್ಷಣ ಮತ್ತು ವಿದ್ಯುತ್ ಮತ್ತು ನೀರಿಗಾಗಿ ಸಬ್ಸಿಡಿಗಳ ಮೇಲೆ ಕೇಂದ್ರೀಕರಿಸಿದ್ದರೂ, ದೆಹಲಿಯು ಮಾಲಿನ್ಯ, ನೀರಿನ ಕೊರತೆ ಮತ್ತು ಕುಸಿಯುತ್ತಿರುವ ಮೂಲಸೌಕರ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಲೇ ಇತ್ತು. ಯಮುನಾ ನದಿಯನ್ನು ಸ್ವಚ್ಛಗೊಳಿಸುವಂತಹ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಎಎಪಿ ಸರ್ಕಾರ ಸಂಪೂರ್ಭ ವಿಫಲವಾಗಿದೆ ಎಂದು ವಿಮರ್ಶಕರು ತಿಳಿಸಿದ್ದಾರೆ. ಅಲ್ಲದೇ ಇದು ಬಗೆಹರಿಯದ ಪ್ರಮುಖ ಸಮಸ್ಯೆಯಾಗಿ ಉಳಿದಿದೆ. ಕಳಪೆ ರಸ್ತೆ ಪರಿಸ್ಥಿತಿಗಳು ಮತ್ತು ಅಸಮರ್ಪಕ ನೀರು ಸರಬರಾಜು ಮುಂತಾದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಎಪಿ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಹೀಗಾಗಿ ಎಎಪಿಗೆ ದೆಹಲಿಯಲ್ಲಿ ಆಡಳಿತ ವಿರೋಧಿ ಅಲೆ ಎದುರಾಗಿತ್ತು.

Leave a Reply

Your email address will not be published. Required fields are marked *