BBMP
Loading ...

Bribe

ಬೆಂಗಳೂರು: ನೂತನ ಕಟ್ಟಡದ ನೀರಿನ ಸಂಪರ್ಕದ ಮೀಟರ್‌ಗೆ ಆರ್‌.ಆರ್‌. ನಂಬರ್‌ ನೀಡಲು ₹4,000 ಲಂಚ ಪಡೆದ ಜಲಮಂಡಳಿ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ನಗರದ ಹೆಗ್ಗನಹಳ್ಳಿ ವ್ಯಾಪ್ತಿಯಲ್ಲಿ ಗುತ್ತಿಗೆದಾರ ದಿವಾಕರ್ ಎಂ. ಅವರು ನೂತನ ಕಟ್ಟಡ ನಿರ್ಮಿಸಿದ್ದಾರೆ. ಆ ಕಟ್ಟಡಕ್ಕೆ ನೀರಿನ ಸಂಪರ್ಕ ಪಡೆದಿದ್ದು, ಮೀಟರ್‌ಗೆ ಆರ್‌.ಆರ್‌. ಸಂಖ್ಯೆ ನೀಡಿರಲಿಲ್ಲ. ಈ ಸಂಬಂಧ ಜಲಮಂಡಳಿಯ ಹೆಗ್ಗನಹಳ್ಳಿ ಉಪವಿಭಾಗದ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಸಂಬಂಧಿತ ಕಚೇರಿಯ ಇನ್‌ಸ್ಪೆಕ್ಟರ್‌ ಎಂ.ವಿಶ್ವನಾಥ್ ಅವರು ಆರ್‌.ಆರ್‌.ಸಂಖ್ಯೆ ನೀಡಲು 4,500 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರ ವಿರುದ್ಧ ದಿವಾಕರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ತನಿಖಾಧಿಕಾರಿಗಳು ರೂಪಿಸಿದ್ದ ಕಾರ್ಯಾಚರಣೆ ಪ್ರಕಾರ ದಿವಾಕರ್ ಅವರು ಶುಕ್ರವಾರ, ಆರೋಪಿಗೆ ಕಚೇರಿಯಲ್ಲೇ 4,000 ರೂ. ನೀಡಿದ್ದರು. ತಕ್ಷಣವೇ ದಾಳಿ ಮಾಡಿ ಸಾಕ್ಷ್ಯ ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ಇಲ್ಲದಿದ್ದರೆ ವಿದ್ಯುತ್, ನೀರಿನ ಸಂಪರ್ಕ ಸಿಗುವುದಿಲ್ಲ

Leave a Reply

Your email address will not be published. Required fields are marked *