BBMP
Loading ...

DKS (1)

Greater Bengaluru News9 : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಲೋಕ ಭವನದಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ.

ಈ ಮಧ್ಯೆ ಪ್ರಮಾಣವಚನಕ್ಕೂ ಮುನ್ನ ಮಂಗಳವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ಜ್ಯೋತಿಷಿಗಳು ಭೇಟಿ ನೀಡಿ ವಾಸ್ತು ಪರಿಶೀಲಿಸಿದ್ದಾರೆ.

‌ನೂತನ ಸಿಎಂ ಡಿಕೆ ಶಿವಕುಮಾರ್ ಕುಳಿತುಕೊಳ್ಳಲಿರುವ ಕುರ್ಚಿಯ ವಾಸ್ತು ಪರಿಶೀಲಿಸಿದ ಜ್ಯೋತಿಷಿಗಳು, ಕುರ್ಚಿಯ ದಿಕ್ಕನ್ನು ಬದಲಿಸಿದ್ದಾರೆ. ಅಲ್ಲದೆ ಜ್ಯೋತಿಷಿಗಳ ಸಲಹೆಯಂತೆ ಸಿಎಂ ಕಚೇರಿಯಲ್ಲಿ ಅಜ್ಜಯ್ಯನ ಫೋಟೋ ಅಳವಡಿಸಲಾಗಿದೆ.

ಡಿ.ಕೆ ಶಿವಕುಮಾರ್ ಅವರು ಅಜ್ಜಯ್ಯನನ್ನು ಬಲವಾಗಿ ನಂಬುತ್ತಾರೆ. ‘ನಾನು ರಾಜನಾಗುವೆ ಎಂದು ನೊಣವಿನಕೆರೆ ಅಜ್ಜಯ್ಯ ಬಾಲ್ಯದಲ್ಲಿಯೇ ಹೇಳಿದ್ದರು. ಅಜ್ಜಯ್ಯನ ಅನುಗ್ರಹದಿಂದ ಮುಖ್ಯಮಂತ್ರಿ ಆಗುತ್ತಿದ್ದೇನೆ’ ಎಂದು ಡಿ.ಕೆ. ಶಿವಕುಮಾರ್ ಈ ಹಿಂದೆ ಹೇಳಿದ್ದರು.

Leave a Reply

Your email address will not be published. Required fields are marked *