ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆದಷ್ಟು ಬೇಗ ಚುನಾವಣೆಗಳನ್ನು ನಡೆಸಲಾಗುತ್ತದೆ, ರಾಜ್ಯಪಾಲರು ಸಹ ಹೇಳಿದ್ದಾರೆ, ಚುನಾವಣೆ ಮುಂದೂಡುವುದರಲ್ಲಿ ಅರ್ಥವಿಲ್ಲ, ಇನ್ನು 4 ತಿಂಗಳೊಳಗೆ ಒಟ್ಟಿನಲ್ಲಿ ಈ ವರ್ಷ ಮುಗಿಯುವುದರೊಳಗೆ ನಡೆಸುತ್ತೇವೆ ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಸದ್ಯದಲ್ಲೇ ಮಿಸಲಾತಿ ಮತ್ತು ವಿಭಾಗಗಳ ಘೋಷಣೆ ಮಾಡಲಾಗುವುದು, ಮತ್ತು ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ಹೇಳಿದ ಶಿವಕುಮಾರ್, ಈ ಬಗ್ಗೆ ವಿಧಾನ ಸಭೆಯಲ್ಲೂ ಚರ್ಚೆಯಾಗಿದೆ, ವಿರೋಧ ಪಕ್ಷಗಳ ಶೇಕಡ 90ರಷ್ಟು ಅಭಿಪ್ರಾಯಗಳನ್ನು ಅಂಗೀಕರಿಸಿದ್ದೇವೆ ಎಂದರು.
ಬಿ ಖಾತಾ ಆಸ್ತಿ ಮಾಲೀಕರಿಗೆ ಇನ್ನು ಬೆಸ್ಕಾಂ ತಾತ್ಕಾಲಿಕ ಸಂಪರ್ಕ ಸಿಗಲ್ಲ! ಆಸ್ತಿ ಮಾಲೀಕ ಶ್ರೀನಿವಾಸ ಬರೆದ ಅನುಭವ ಲೇಖನ


