BBMP
Loading ...

Vaikunta Ekadashi

ತುಮಕೂರು: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಜನವರಿ 9 ಮತ್ತು 10ರಂದು ತುಮಕೂರಿನ ಹುಲಿಯೂರು ದುರ್ಗದ ಬೆಣಚಕಲ್ಲು ಶ್ರೀ ಉದ್ದವ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಸನ್ನ ದೇವಸ್ಥಾನದಲ್ಲಿ ವಿಶೇಷ ಪೂಜಾ-ಕೈಂಕರ್ಯಗಳು ಜರುಗಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಬೇಕೆಂದು ಕೋರಲಾಗಿದೆ.

ಜ. 09 ಅಂದರೆ ಗುರುವಾರ ಬೆಳಗ್ಗೆ ಅಭಿಷೇಕ, ಸಂಜೆ ತಳಿರು ತೋರಣ, ರಾತ್ರಿ 10 ಗಂಟೆಯ ನಂತರ ಮೂಲ ದೇವರಿಗೆ ಅಲಂಕಾರ, ತೊಟ್ಟಿಲು ಅಲಂಕಾರ, ರಂಗೋಲಿ, ಪೂಜಾ ಕೈಂಕರ್ಯಗಳು ನಡೆಯುತ್ತದೆ. ಅದೇ ರೀತಿ ಜನವರಿ  10ರ ವೈಕುಂಠ ಏಕಾದಶಿ ದಿನದಂದು ಪ್ರಾತಃಕಾಲ ಪ್ರಾಖಾರ ಉತ್ಸವ ಮತ್ತು ದ್ವಾರ ಪೂಜೆ, ಪ್ರದಕ್ಷಿಣೆ, ಅರ್ಚನೆ, ಅಲಂಕಾರ, ವಿಶೇಷ ಪೂಜೆ ಮತ್ತು ನೈವೇಧ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಯೂ ವಿಶಿಷ್ಟ ಹಾಗೂ ವಿಶೇಷ. ಹಿಂದೂಗಳು ಪ್ರತಿ ತಿಂಗಳು ಏಕಾದಶಿ ವ್ರತ ಆಚರಿಸುತ್ತಾರೆ. ವಿಷ್ಣುವನ್ನು ಆರಾಧಿಸುವ ದಿನ ಏಕದಾಶಿ. ಈ ದಿನ ಉಪವಾಸ ಮಾಡುವ ಮೂಲಕ ದೇವರಕೃಪೆಗೆ ಪಾತ್ರರಾಗಲು ಬಯಸುತ್ತಾರೆ. ಒಂದು ತಿಂಗಳಲ್ಲಿ ಎರಡು ಬಾರಿ ಏಕಾದಶಿ ಬರುತ್ತದೆ. ಕೃಷ್ಣ ಪಕ್ಷದಲ್ಲಿ ಒಮ್ಮೆ ಏಕಾದಶಿ ಬಂದರೆ, ಇನ್ನೊಮ್ಮೆ ಶುಕ್ಲ ಪಕ್ಷದಲ್ಲಿ ಏಕಾದಶಿ ಆಚರಣೆ ಇರುತ್ತದೆ. ಇದೀಗ ಜನವರಿ 10ಕ್ಕೆ ವೈಕುಂಠ ಏಕಾದಶಿ ಇದೆ. ವೈಕುಂಠ ಏಕಾದಶಿಯನ್ನು ಕರ್ನಾಟಕದಲ್ಲಿ ಬಹಳ ವಿಶೇಷವಾಗಿ ಆಚರಿಸುತ್ತಾರೆ.

ಏಕಾದಶಿ ಪೂಜಾ ವಿಧಾನಗಳು
ಈ ಏಕಾದಶಿಯಂದು ಬೆಳಿಗ್ಗೆ ಬೇಗ ಎದ್ದು ಪವಿತ್ರ ಸ್ನಾನ ಮಾಡಬೇಕು ಮತ್ತು ಮನೆ ಹಾಗೂ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಬೇಕು.
* ಮರದ ಮಣೆ ಅಥವಾ ಹಲಗೆಯ ಮೇಲೆ ವಿಷ್ಣುವಿನ ವಿಗ್ರಹ ಹಾಗೂ ಯಂತ್ರವನ್ನ ಇರಿಸಬೇಕು.
* ದೇಸಿ ತುಪ್ಪದಿಂದ ದೀಪ ಬೆಳಗಬೇಕು. ವಿಷ್ಣುವಿನ ಮೂರ್ತಿ ಹೂವುಗಳಿಂದ ಅಲಂಕರಿಸಿ, ಸಿಹಿತಿಂಡಿ ಹಾಗೂ ತುಳಸಿ ದಳವನ್ನು ಅರ್ಪಿಸಬೇಕು. * ತುಳಸಿ ದಳವು ವಿಷ್ಣುವಿಗೆ ಪ್ರಿಯವಾದ ವಸ್ತುಗಳಲ್ಲಿ ಒಂದಾಗಿದೆ. ಆ ಕಾರಣಕ್ಕೆ ತುಳಸಿದಳವಿಲ್ಲದೇ ಪೂಜೆ ಅಪೂರ್ಣ ಎಂದು ಹೇಳಲಾಗುತ್ತದೆ.
ದ್ವಾದಶಿ ತಿಥಿಯಂದು ಏಕಾದಶಿ ವ್ರತವು ಪೂರ್ಣವಾಗುತ್ತದೆ.

ಸಂಜೆಯೂ ನೈವೇದ್ಯ ಹಾಗೂ ಪಂಚಾಮೃತ ಅರ್ಪಿಸಿ ದೇವರಿಗೆ ಪೂಜೆ ಸಲ್ಲಿಸಬೇಕು. ಪೂಜೆ ಬಳಿಕ ನೀವು ಹಣ್ಣುಗಳನ್ನು ತಿನ್ನಬಹುದು.

ಮಂತ್ರ
1. ಓಂ ನಮೋ ಭಗವತೇ ವಾಸುದೇವಯೇ..!!
2. ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ ನಾರಾಯಣ ವಾಸುದೇವ..!!
3. ಹರೇ ರಾಮ್ ಹರೇ ರಾಮ್ ರಾಮ್ ರಾಮ್ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ..!!

ವೈಕುಂಠ ಏಕಾದಶಿ ಆಚರಣೆ ಹಿನ್ನೆಲೆ: ಹಿಂದು ಪುರಾಣಗಳ ಪ್ರಕಾರ, ವೈಕುಂಠ ಏಕಾದಶಿಯ ಈ ಪವಿತ್ರ ದಿನದಂದು ಸಾಗರ ಮಂಥನವನ್ನು

ನಡೆಸಲಾಯಿತು. ಈ ಸಾಗರ ಮಂಥನದ ಸಮಯದಲ್ಲಿ, ಕ್ಷೀರ ಸಾಗರದಿಂದ ದೈವಿಕ ಅಮೃತವು ಹೊರಹೊಮ್ಮಿತು. ಅದನ್ನು ದೇವರುಗಳ ನಡುವೆ ವಿತರಿಸಲಾಯಿತು. ಆದ್ದರಿಂದ ಈ ಮಂಗಳಕರ ದಿನದಂದು ಸಾಯುವ ಜನರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಮತ್ತು ಭಗವಾನ್ ವಿಷ್ಣುವಿನ ಸ್ವರ್ಗೀಯ ನಿವಾಸ ಅಥವಾ ವೈಕುಂಠ ಧಾಮವನ್ನು ತಲುಪುತ್ತಾರೆ ಎಂಬುದು ಹಿಂದು ಭಕ್ತರ ನಂಬಿಕೆ.

ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡಲ್ಲ: ಸಿ.ಎಂ ಸಿದ್ದರಾಮಯ್ಯ

Leave a Reply

Your email address will not be published. Required fields are marked *