ಬೆಂಗಳೂರು: ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಕಾಮಾಕ್ಷಿಪಾಳ್ಯದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಇಂದು ಬೆಳಗ್ಗೆ ಬೆಳಗ್ಗೆ 4.30 ರಿಂದ ರಾತ್ರಿ 11.00 ರವರೆಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂರ್ಜಾ ಕಾರ್ಯಗಳು ನಿರಂತರವಾಗಿ ನಡೆಯಲಿದೆ. ವೈಕುಂಠ ಮಹಾದ್ವಾರ ಪ್ರವೇಶವೂ ಕೂಡ ನಡೆಯುತ್ತಿದೆ. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಈ ಕಾರ್ಯಕ್ರಮಕ್ಕೆ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ. ಗೋಪಾಲಯ್ಯ, ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಶ್ರೀಮತಿ ಜಯಲಕ್ಷ್ಮೀ ಮತ್ತು ಶ್ರೀ ಚನ್ನಕೇಶವಚಾರ್ಯ, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮಹಾಪೌರರಾದ ಶ್ರೀಮತಿ ಹೇಮಲತಾ ಅವರು ಭಾಗವಹಿಸಿದರು.
ವೈಕುಂಠ ಏಕಾದಶಿ ಪ್ರಯುಕ್ತ ಬೆಳಗಿನ ಜಾವ 01.15ರಿಂದ ಸ್ವಾಮಿಯವರ ಅಭಿಷೇಕ, ಅಲಂಕಾರ, ಸಹಸ್ರನಾಮಾರ್ಚನೆ, ಅಷ್ಠಾವದಾನ ಸೇವೆ, ವೈಕುಂಠದ್ವಾರ ಪೂಜೆ, ದ್ವಾರ ಪ್ರವೇಶ, ಮಹಾಮಂಗಳಾರತಿ, ತೀರ್ಥ-ಉಚಿತ ಲಾಡು ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ.
ಜನವರಿ 11 (ಶನಿವಾರ)
ಮುಕ್ಕೋಟಿ ದ್ವಾದಶಿ ಪ್ರಯುಕ್ತ ಬೆಳಗ್ಗೆ 08.00ರಿಂದ ಶ್ರೀ ಭೂನೀಳಾ ಸಮೇತ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ತಿರು-ಕಲ್ಯಾಣ ಮಹೋತ್ಸವ ಮತ್ತು ಮಧ್ಯಾಹ್ನ 12-30 ರಿಂದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಸಂಜೆ 05-30ರಿಂದ ವಿವಿಧ ನೃತ್ಯತಂಡ ಹಾಗೂ ಜಾನಪದ ಮೇಳಗಳ ಸಮೇತ ಸಣ್ಣಕ್ಕಿಬಯಲು, ವೃಷಭಾವತಿನಗರ ಮತ್ತು ಕಾಮಾಕ್ಷಿಪಾಳ್ಯ ಮುಖ್ಯ ಬೀದಿಗಳಲ್ಲಿ ಶ್ರೀನಿವಾಸ ಸ್ವಾಮಿ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ. ಹಾಗೂ ರಾತ್ರಿ 09-30ರಿಂದ ಸ್ವಾಮಿಯವರ ಶಯನೋತ್ಸವ ಪೂಜೆ ನಡೆಯುತ್ತದೆ.
ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಸಣ್ಣ ನೀರಾವರಿ ಇಲಾಖೆಯ 1.43 ಲಕ್ಷ ರೂ. ಮೌಲ್ಯದ ಪೀಠೋಪಕರಣ ಜಪ್ತಿ


