BBMP
Loading ...

BESCOM

Greater Bengaluru News9: ರಾಮನಗರದ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಇಂಜಿನಿಯರ್​ಗಳ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ.

ರಾಮನಗರ ಗ್ರಾಮಾಂತರ ಉಪ ವಿಭಾಗದ ಪ್ರಕಾಶ್​ ಎನ್ನುವ ಓರ್ವ ಪ್ರಭಾರ ಜೆಇ, ಬೆಸ್ಕಾಂ ಕಂಪನಿಯ ಸುಮಾರು 9 ವಿದ್ಯುತ್​ ಕಂಬಗಳನ್ನು ಹಾಕಿ, ಒಂದು ಎಸ್​ಎಸ್​ಪಿ ಅಥವಾ ಬೋರ್​ವೆಲ್​ ಕನೆಕ್ಷನ್​ ಕೊಟ್ಟಿದ್ದಾರೆ. ಕಾನೂನಿನ ಪ್ರಕಾರ, ಶೀಘ್ರ ಸಂಪರ್ಕ ಯೋಜನೆಗೆ ಸುಮಾರು 100 ಮೀಟರ್​ಗಳ ಅಂತರ ಇರಬೇಕು. ಎರಡು ಬೋರ್​ವೆಲ್​ಗಳು ಇರಬೇಕು ಹಾಗೂ ಪ್ರತ್ಯೇಕ ಓನರ್​ಗಳು ಇರಬೇಕು ಮತ್ತು ಎರಡು ಸರ್ವೆ ನಂಬರ್​ಗಳು ಇರಬೇಕು. ಆದರೆ, ಇಲ್ಲಿ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಒಂದೇ ಓನರ್​ ಇರುವಂತಹ ಕೃಷಿ ಜಮೀನಿಗೆ ಹಿಂದಕ್ಕೆ ಮೂರು ಹಾಗೂ ಮುಂದಕ್ಕೆ ಮೂರು ಕಂಬಗಳನ್ನು ಹಾಗೂ ಎರಡು ಕಂಬಗಳನ್ನು ಹಾಕಿ, ಒಂದು ಸ್ಟ್ರಕ್ಚರ್​ ಮಾಡಿ, ಅದಕ್ಕೊಂದು ಟ್ರಾನ್ಸ್​ಫಾರ್ಮರ್​ ಹಾಕಿದ್ದಾರೆ. ಇದೆಲ್ಲವನ್ನು ಸ್ವಯಂ ಕಾರ್ಯ ಯೋಜನೆ ಅಡಿ ಮಾಡಬೇಕಿತ್ತು. ಆದರೆ, ಬೆಸ್ಕಾಂ ಕಂಪನಿಯ ವಿದ್ಯುತ್​ ಕಂಬಗಳು ಹಾಗೂ ವೈರ್​ಗಳನ್ನು ಬಳಸಿ, ಈ ಕಾಮಗಾರಿ ಮಾಡಲಾಗಿದೆ. ಈ ಕಾಮಗಾರಿಯನ್ನು ಯಾವ ಯೋಜನೆ ಅಡಿ ಮಾಡಲಾಗಿದೆ? ಯಾವ ರೀತಿ ವರ್ಕ್​ ಆರ್ಡರ್​ಗೆ ಸಹಿ ಹಾಕಿದ್ದಾರೆ? ಎಂಬ ಪ್ರಶ್ನೆ ಮೂಡಿದೆ.

ಎಸ್​ಎಸ್​ಪಿ ಕಾಮಗಾರಿ ಮಾಡಿಸುವಾಗ ಕಂಬ, ವೈರ್​ ಹಾಗೂ ಕೂಲಿ ಕಾರ್ಮಿಕರನ್ನು ಸ್ವತಃ ಅರೇಂಜ್​ ಮಾಡಬೇಕು. ಹಣ ಕಟ್ಟಿದ ಮೇಲೆ ಟ್ರಾನ್ಸ್​ಫಾರ್ಮ್​ ಕೊಡುತ್ತಾರೆ. ಈ ರೀತಿ ಕೊಡುವಾಗ ಎರಡು ಓನರ್​, ಎರಡು ಸರ್ವೇ ನಂಬರ್​ ಇರಬೇಕು. ಆದರೆ, ಒಬ್ಬರಿಗೆ ಹೇಗೆ ಕೊಟ್ಟರು? ಓರ್ವ ಜೆಇ ತನ್ನ ಅಡಿಯಲ್ಲಿ ಈ ಒಂದು ಕಾಮಗಾರಿಯನ್ನು ಮಾಡಿಸಿದ್ದಾರೆ. ಇದಕ್ಕೆ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪ ಇದೆ.

Leave a Reply

Your email address will not be published. Required fields are marked *