BBMP
Loading ...

Lorry Strike

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಹಾಲು, ಬಸ್ಸು, ವಿದ್ಯುತ್, ಮೆಟ್ರೋ ಸೇರಿದಂತೆ ಹಲವು ದಿನೋಪಯೋಗಿ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಜನಸಾಮಾನ್ಯರ ಮೇಲೆ ದೊಡ್ಡ ಹೊರೆ ಬಿದ್ದಿದೆ. ಈ ಬೆಲೆ ಏರಿಕೆಯಿಂದ ಬೇಸತ್ತು ಸರ್ಕಾರದ ವಿರುದ್ದ ರಾಜ್ಯ ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಸಜ್ಜಾಗಿದೆ. ರಾಜ್ಯದಲ್ಲಿ ಮತ್ತೆ ಬಂದ್​ ಬಿಸಿ ತಟ್ಟಲಿದೆ.

ಹೌದು, ಡೀಸೆಲ್‌ ದರ ಮತ್ತು ಟೋಲ್‌ ಶುಲ್ಕ ಹೆಚ್ಚಳ ವಿರೋಧಿಸಿ, ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಸಜ್ಜಾಗಿದೆ.

ಈ ಕುರಿತು ಜಿ.ಆರ್‌. ಷಣ್ಮುಖಪ್ಪ ಮಾತನಾಡಿ, ಏ.14 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಈಗಾಗಲೇ ಕರೆ ನೀಡಲಾಗಿದೆ. ಹೊರ ರಾಜ್ಯಗಳ ಲಾರಿ ಮಾಲೀಕರು ಸೇರಿದಂತೆ ರಾಜ್ಯವ್ಯಾಪಿ ಬೆಂಬಲ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯುವುದಿಲ್ಲ. ಕೆಲ ಬಣದ ನಾಯಕರು ಸರ್ಕಾರದೊಟ್ಟಿಗೆ ಕೈಜೋಡಿಸಿರುವುದನ್ನು ವಿರೋಧಿಸುತ್ತಾರೆ. ಈಗಾಗಲೇ ಹಲವು ಪೆಟ್ರೋಲ್‌ ಬಂಕ್‌ ಸಂಘಟನೆಗಳು ಸೇರಿದಂತೆ ರಾಜ್ಯವ್ಯಾಪಿ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಅದರಿಂದ ಮುಷ್ಕರ ನಡೆಯುವುದು ನಿಶ್ಚಿತ ಎಂದು ಹೇಳಿದರು. ನಾಳೆಯಿಂದ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಲಾರಿಗಳು ಮುಷ್ಕರಕ್ಕೆ ಬೆಂಬಲಿಸುವ ಮೂಲಕ ಸಂಚಾರವನ್ನು ಸ್ಥಗಿತಗೊಳಿಸಲಿವೆ. ಹೊರರಾಜ್ಯಗಳಿಂದಲೂ ಲಾರಿಗಳನ್ನು ಬರಲು ಬಿಡುವುದಿಲ್ಲ, ಇದರಿಂದ ವಾಣಿಜ್ಯ ಸೇರಿದಂತೆ ಎಲ್ಲ ಮಾದರಿಯ ಸರಕು ಸೇವೆಗಳು ಸ್ಥಗಿತಗೊಳ್ಳಲಿವೆ ಎಂದರು.

ಪೆಟ್ರೋಲಿಯಂ ಅಸೋಸಿಯೇಷನ್, ಗ್ಯಾಸ್ ವಾಹನಗಳು, ಆಯಸಿಡ್ ವಾಹನಗಳು, ಅಕ್ಕಿ ಮತ್ತು ತರಕಾರಿ ಮಾರುವ ವಾಹನ ಸೇರಿದಂತೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ಬಂದ್ ಇರಲಿದೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾಹಿತಿ ನೀಡಿದ್ದಾರೆ.

ಯಾವೆಲ್ಲಾ ಬೆಲೆ ಏರಿಕೆ ವಿರುದ್ದ ಸಮರ?
* ಡಿಸೇಲ್ ದರ ಹೆಚ್ಚಳ
* ರಾಜ್ಯ ಹೆದ್ದಾರಿಗಳಿಗೆ ಟೋಲ್ ಅಳವಡಿಕೆ ಹಣ ವಸೂಲಿ ಮಾಡುತ್ತಿರುವುದು.
* ಆರ್​ಟಿಒ ಬಾರ್ಡರ್ ಚೆಕ್ ಪೋಸ್ಟ್
* FC ಫಿಟ್ನೆಸ್ ಶುಲ್ಕ ಹೆಚ್ಚಿಸಿರುವುದು
* ಬೆಂಗಳೂರು ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ನೋ ಎಂಟ್ರಿ.
* ಚಾಲಕರ ಮೇಲೆ ಹಲ್ಲೆ ವಿರುದ್ಧ ಸಮರಕ್ಕೆ ಸಜ್ಜಾಗಿದ್ದಾರೆ.

5 ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಕರೆ

ಡಿಸೇಲ್ ದರ ಇಳಿಕೆ
*ಟೋಲ್ ದರ ಕಡಿಮೆ ಮಾಡಬೇಕು
*ಬಾರ್ಡರ್ ಚೆಕ್ ಪೋಸ್ಟ್ ತೆರವು ಮಾಡಬೇಕು
*ಎಫ್ ಸಿ ಶುಲ್ಕ ಇಳಿಕೆ
*ಸರಕು ಸಾಗಾಣಿಕೆ ವಾಹನಗಳ ಓಡಾಟಕ್ಕೆ ಮನವಿ

ಏನೆಲ್ಲಾ ಬಂದ್ ಆಗಲಿದೆ?
ಜಲ್ಲಿ ಕಲ್ಲು, ಮರಳು ಲಾರಿ ಬಂದ್
*ಗೂಡ್ಸ್ ವಾಹನಗಳು ಬಂದ್
*6 ಲಕ್ಷ ಲಾರಿ ಬಂದ್
*ಅಕ್ಕಿ ಲೊಡ್, ಗೂಡ್ಸ್, ಪೆಟ್ರೋಲ್ ಡಿಸೇಲ್ ಲಾರಿ ಬಂದ್
* ಚಾಲಕರ ಸಂಘದಿಂದ ಬಂದ್
*ಬೇರೆ ರಾಜ್ಯದಿಂದಲೂ ವಾಹನ ಬರೋದಿಲ್ಲ

ಸರ್ಕಾರಕ್ಕೆ ತಟ್ಟಲಿದೆ ಹೋರಾಟ ಬಿಸಿ!
ಎಲ್ಲಾ ಬಾರ್ಡರ್ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳು ನಿಲ್ಲಿಸಿ ಹೋರಾಟ ಮಾಡುವುದಾಗಿ ಲಾರಿ ಮಾಲೀಕರ ಸಂಘ ತಿಳಿಸಿದೆ. ಲಾರಿ ಚಾಲಕರ ಈ ಹೋರಾಟದ ಬಿಸಿ ಸರ್ಕಾರದ ಜೊತೆ ಜನಸಾಮಾನ್ಯರಿಗೂ ತಟ್ಟಲಿದೆ. ಕ್ಯಾಬ್​ಗಳು ಬಂದ್ ಆದ್ರೆ ಜನ ಸಾಮಾನ್ಯರು ಓಡಾಡೋದು ಕೂಡ ಕಷ್ಟ ಕಷ್ಟವಾಗಲಿದೆ. ನಿತ್ಯೋಪಯೋಗಿ ವಸ್ತುಗಳನ್ನ ಸಾಗಿಸುವ ಲಾರಿ ಬಂದ್​ ಆದ್ರೆ ಜನರಿಗೂ ಸಮಸ್ಯೆ ಆಗಲಿದೆ.

ಜಾತಿ ಗಣತಿ ವರದಿ: ಒಕ್ಕಲಿಗ, ಲಿಂಗಾಯತ ಸಮುದಾಯದ ವಿರೋಧ!

Leave a Reply

Your email address will not be published. Required fields are marked *