ಬೆಳ್ತಂಗಡಿ: ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕ್ಯೂ ಕಾಂಪ್ಲೆಕ್ಸ್ ಅನ್ನು ಜನವರಿ 7ರಂದು ಲೋಕಾರ್ಪಣೆಗೊಳಿಸಿದರು. ಅವರ ಪತ್ನಿ ಡಾ.ಸುದೇಶ್ ಧನ್‌ಕರ್ ಅವರೊಂದಿಗೆ ಆಗಮಿಸಿದ ಉಪ ರಾಷ್ಟ್ರಪತಿಯವರು ಮೊದಲಿಗೆ ಕ್ಷೇತ್ರಕ್ಕೆ ತೆರಳಿ ಶ್ರೀಮಂಜುನಾಥ ಸ್ವಾಮಿಯ ದರ್ಶನ ಮಾಡಿದರು. ನಂತರ ಸಾನ್ನಿಧ್ಯ ಕ್ಯೂ ಕಾಂಪ್ಲೆಕ್ಸ್ ಅನ್ನು ಉದ್ಘಾಟಿಸಿದರು. ‘ಕ್ಯೂ ಕಾಂಪ್ಲೆಕ್ಸ್’ ಹಲವು ವಿಶೇಷತೆಗಳನ್ನು ಹೊಂದಿದ್ದು, ಈ ಕುರಿತ ವಿಶೇಷ ವರದಿ ಇಲ್ಲಿದೆ.
ಪ್ರತಿ ಸಭಾಂಗಣವು ಪ್ರವೇಶ, ನಿರ್ಗ ಮನ ಮತ್ತು ತುರ್ತು ನಿರ್ಗಮನ ದ್ವಾರಗಳು, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು, ಶಿಶುಪಾಲನಾ ಕೊಠಡಿ ಮತ್ತು ಕೆಫೆಟೇರಿಯಾ ಹೊಂದಿವೆ. ಆಧ್ಯಾತ್ಮಿಕ ಮತ್ತು ಇತರ ವಿಷಯಗಳ ಬಗ್ಗೆ ಡಿಜಿಟಲ್ ಟಿ.ವಿ.ಗಳ ಮೂಲಕ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ. ತಿರುಪತಿಯಲ್ಲಿನ ವ್ಯವಸ್ಥೆ ಅಧ್ಯಯನ ಮಾಡಿ ನಿರ್ಮಿಸಿದ ಕ್ಯೂ ಕಾಂಪ್ಲೆಕ್ಸ್‌ನ ಕಾರ್ಯಾಚರಣೆಯು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟ್ಟಿದೆ.
ಸುಸಜ್ಜಿತವಾದ 160 ಎಐ ಆಧಾರಿತ ಕ್ಯಾಮೆರಾಗಳ ಮೂಲಕ ನಿಖರವಾಗಿ ಜನರ ಎಣಿಕೆ, ಕಣ್ಣಾವಲು ನಡೆಸಲಿದೆ. ಕ್ಯೂ ಕಾಂಪ್ಲೆಕ್ಸ್ ಮತ್ತು ದೇವಸ್ಥಾನದಲ್ಲಿ ಒಟ್ಟು 263 ಸ್ಪೀಕರ್‌ಗಳು ಮತ್ತು 54 ಆಂಪ್ಲಿಫೈಯರ್‌ಗಳನ್ನು ಅಳವಡಿಸಲಾಗಿದೆ. ಪಬ್ಲಿಕ್ ಅಡ್ರೆಸ್ ಸಿಸ್ಟಂ ಮೂಲಕ ಕಮಾಂಡ್ ಸೆಂಟರ್‌ನಿಂದ ನೇರವಾಗಿ ನಿರ್ಧಿಷ್ಟ, ಸಾಮಾನ್ಯ ಪ್ರಕಟಣೆ ಮಾಡಲಾಗುತ್ತದೆ.
ಪ್ರತಿ ಸಭಾಂಗಣಗಳಲ್ಲಿ ಹೈ- ವಾಲ್ಯೂಮ್. ಕಡಿಮೆ-ವೇಗದ (ಎಚ್‌ವಿಎಲ್‌ಎಸ್) ಫ್ಯಾನ್ ಅಳವಡಿಸಲಾಗಿದ್ದು. ಗಾಳಿಯ ಪ್ರಸರಣ ವ್ಯವಸ್ಥೆ ಯೊಂದಿಗೆ ಆರಾಮದಾಯಕ 650 ಕೆವಿ ಸಾಮರ್ಥದ ಸೌರವಿದ್ಯುತ್ ಘಟಕ ಅಳವಡಿಸಲಾಗಿದೆ. ಕ್ಯೂ ಕಾಂಪ್ಲೆಕ್ಸ್ ಅಂತರ್ ಸಂಪರ್ಕಿತ ಇಳಿಜಾರುಗಳು ಮತ್ತು ಏಕಮುಖ ಪಾದಚಾರಿ ಹರಿವನ್ನು ಒಳಗೊಂಡಿದ್ದು, ಬಹಳಜನಸಂದಣಿಯ ಸಮಯದಲ್ಲಿಯೂ ಸುಗಮವಾದ ಮತ್ತು ಸ್ಥಿರವಾದ ಗುಂಪಿನ ಚಲನೆಯನ್ನು ಖಚಿತಪಡಿಸುತ್ತದೆ. ಎಲ್ಲ ಸರತಿ ಸಾಲುಗಳು ತಡೆರಹಿತ ನ್ಯಾವಿಗೇಷನ್‌ನಿಂದ ಸ್ವಯಂ- ಮಾರ್ಗದರ್ಶಕವಾಗಿವೆ.
ಕ್ಯೂ ಕಾಂಪ್ಲೆಕ್ಸ್‌ನ ಹೃದಯ ಭಾಗದಲ್ಲಿ ಕ್ಯೂ ಮ್ಯಾನೇಜ್ ಮೆಂಟ್ ಸಾಫ್ಟ್‌ವೇರ್, ಅಗ್ನಿಶಾಮಕ ಮತ್ತು ಸುರಕ್ಷತಾ ವ್ಯವಸ್ಥೆಗಳು, ಕಣ್ಣಾವಲು, ಪಬ್ಲಿಕ್ ಅಡ್ರೆಸ್ ಸಿಸ್ಟಂಗಳು, ಡಿಜಿಟಲ್ ಸಂಕೇತಗಳು, ಕಟ್ಟಡ ನಿರ್ವಹಣಾ ವ್ಯವಸ್ಥೆಗಳ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಆಧುನಿಕ ತಂತ್ರಜ್ಞಾನವನ್ನೊಳಗೊಂಡ 10 ಸರ್ವ‌್ರಗಳನ್ನು ಹೊಂ ದಿದೆ. ಕೇಂದ್ರೀಕೃತ ಮೇಲ್ವಿಚಾರಣೆಯಿಂದ ಎಲ್ಲ ಕಾರ್ಯಾ ಚರಣೆಗಳು ಮತ್ತು ನಿರ್ವಹಣೆಯು ಸಮಸ್ಯೆಗಳಿಗೆ ತ್ವರಿತ ಪರಿಹಾರವನ್ನು ಒದಗಿಸುತ್ತವೆ.
ಒಂಟಿ ಮನೆ ನಿರ್ಮಾಣಕ್ಕಾಗಿ ಫೆ. 25ರ ಒಳಗಾಗಿ ಅರ್ಜಿ ಸಲ್ಲಿಸಿ: ತುಷಾರ್ ಗಿರಿನಾಥ್


